ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ದರ ಎಷ್ಟು?

ನವದೆಹಲಿ: ಸತತ ಏರಿಕೆ ಬಳಿಕ, ಇಳಿಕೆ ಕಂಡು ಮತ್ತೆ ಏರಿಕೆಯತ್ತ ಮುಖಮಾಡಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಶನಿವಾರ ಕೂಡ ಬೆಲೆ ಏರಿಕೆಯಾಗಿದ್ದು, ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಲೀ. ಪೆಟ್ರೋಲ್‌ 19 ಪೈಸೆ ಮತ್ತು ಡೀಸೆಲ್‌ 29 ಪೈಸೆಗಳಷ್ಟು ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್‌ ಬೆಲೆಯಲ್ಲಿ ಲೀಟರ್‌ಗೆ 19 ಪೈಸೆ ಏರಿಕೆಯಾಗುವ ಮೂಲಕ 71.53 ರೂ.ಗೆ ಮಾರಾಟವಾಗುತ್ತಿದ್ದು, ಲೀಟರ್‌ ಡೀಸೆಲ್‌ಗೆ 30 ಪೈಸೆ ಏರಿಕೆಯಾಗಿ 65.17 ರೂ.ಗೆ ಮಾರಾಟವಾಗುತ್ತಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್‌ ಲೀ.ಗೆ 19 ಪೈಸೆ ಏರಿಕೆಯಾಗಿದ್ದು, 69.26 ರೂ.ಗಳಷ್ಟಾಗಿದ್ದು ಮತ್ತೆ 70ರ ಗಡಿದಾಟುವ ಮುನ್ಸೂಚನೆ ನೀಡಿದೆ. ಡೀಸೆಲ್‌ ಲೀಟರ್‌ಗೆ 29 ಪೈಸೆ ಏರಿಕೆಯಾಗಿ 63.10 ರೂ.ಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ 74.91 ರೂ. ಇರುವ ಪೆಟ್ರೋಲ್‌ ಲೀ.ಗೆ 19 ಪೈಸೆ ಏರಿಕೆಯಾಗಿದ್ದು, ಡೀಸೆಲ್‌ ಲೀಟರ್‌ಗೆ 31 ಪೈಸೆ ಏರಿಕೆಯಾಗಿ 66.04 ರೂ.ಗಳಷ್ಟಿದೆ.

ಕೋಲ್ಕತಾದಲ್ಲಿ 63.93 ಮತ್ತು ಚೆನ್ನೈನಲ್ಲಿ 65.62 ರೂ.ಗೆ ಮಾರಾಟವಾಗುತ್ತಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *