ಅನಂತ್ ನಾಯಕ್ ಮುದ್ದೂರು
ನಾಲ್ಕೂರು ಗ್ರಾಮ ಅಭಿವೃದ್ಧಿ ಹೊಂದುತ್ತಿರುವ ಗ್ರಾಮವಾಗಿದ್ದು, ಇಲ್ಲಿ ಹಲವಾರು ಊರುಗಳು ಸೇರಿ ಸುಮಾರು 13,000ಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದೆ. ಸುತ್ತಮುತ್ತಲ ಜನರು ಅನಾರೋಗ್ಯ ಪೀಡಿತರಾದರೆ ಸರ್ಕಾರಿ ಉಪ ಆರೋಗ್ಯ ಕೇಂದ್ರ ನಾಲ್ಕೂರಿಗೆ ಬಂದರೆ ಇಲ್ಲಿ ಕಾಯಂ ವೈದ್ಯರಿಲ್ಲದೇ ಪರದಾಡುವಂತಾಗಿದೆ.
ಜನರು ಬಹುಬೇಡಿಕೆ ನೀಡಿದ್ದರ ಫಲವಾಗಿ ಬಾಡಿಗೆ ಕಟ್ಟಡದಲ್ಲಿದ್ದ ಉಪಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಎಲ್ಲ ರೀತಿಯ ಸೌಲಭ್ಯಗಳ ಮಹಿಳಾ ಸಹಾಯಕಿ ಆರೋಗ್ಯ ಉಪಕೇಂದ್ರ ಸ್ಥಾಪನೆಗೊಂಡಿತು. ಆದರೇನು ಫಲ? ಇಲ್ಲಿ ತುರ್ತಾಗಿ ರೋಗಿಗಳು ಬಂದರೆ ಮುಚ್ಚಿದ ಬಾಗಿಲು ನೋಡಬೇಕು. ಬಡಜನರು ಖಾಸಗಿ ವೈದ್ಯರ ಮೊರೆ ಹೋಗಬೇಕು.
ಚಿಕಿತ್ಸೆ ಇಲ್ಲ
ಇಲ್ಲಿ ಮಹಿಳಾ ಸಹಾಯಕಿಯರಿಗೆ ಉಳಿಯಲು ಬೇಕಾದ ವಸತಿಯ ವ್ಯವಸ್ಥೆ ಇದೆ. ಈಗ ಪ್ರತಿನಿತ್ಯ ಮಹಿಳಾ ಕಿರಿಯ ಆರೋಗ್ಯ ಸಹಾಯಕರು ಬಂದು ಹೋದರೂ ಎಮರ್ಜೆನ್ಸಿ ಇದ್ದರೆ ಯಾವುದೇ ಚಿಕಿತ್ಸೆ ಸಿಗುವುದಿಲ್ಲ. ಇಲ್ಲವೆ ಬೆಳ್ವೆ, ಹೆಬ್ರಿ, ಕೊಕ್ಕರ್ಣೆ, ಕರ್ಜೆ ಮುಂತಾದ ಸರ್ಕಾರಿ ಆಸ್ಪತ್ರೆಗೆ ತೆರಳಬೇಕು.
ಬಾಡಿಗೆ ವಾಹನ ಮೊರೆ
ಇಲ್ಲಿಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು, ವಿಕಲಚೇತನರು ಮುಂತಾದವರು ದೂರದ ಊರುಗಳಿಂದ ರಿಕ್ಷಾ ಬಾಡಿಗೆ ವಾಹನ ಮಾಡಿಕೊಂಡು ಬಂದರೆ ವೈದ್ಯರಿಲ್ಲದೆ ಹೆಣಗಾಡುವಂತಾಗಿದೆ. ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಸರ್ಕಾರಿ ವೈದ್ಯಾಧಿಕಾರಿ ಸಹಿ ಪಡೆಯಲು ದೂರದ ಊರಾದ ಕೊಕ್ಕರ್ಣೆಗೆ ತೆರಳಬೇಕು. ಅಲ್ಲಿ ಒಮ್ಮೊಮ್ಮೆ ಕಾರ್ಯನಿಮಿತ್ತ ರಜೆಯಲ್ಲಿದ್ದರೆ ಎರಡು ಬಾರಿ ತಿರುಗಾಡಬೇಕಾಗುತ್ತದೆ. ಈ ಎಲ್ಲ ಸೂಕ್ಷ್ಮ ಸಮಸ್ಯೆ ಸಂಬಂದಪಟ್ಟ ಇಲಾಖೆ, ಜನಪ್ರತಿನಿಧಿಗಳು, ಸಚಿವರು ಗಣನೆಗೆ ತೆಗೆದುಕೊಂಡು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರ ಆಶಯ.
ಜನಸಂಖ್ಯೆ ಆಧಾರಿತ ಮಾನದಂಡವಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಸಲು ಆಗುತ್ತಿಲ್ಲ. ಕನಿಷ್ಟ 20000ಕ್ಕೂ ಅಧಿಕ ಜನಸಂಖ್ಯೆ ಇರಬೇಕು. ಈ ಹಿಂದೆ ಮನವಿ ಹೋಗಿದ್ದು ಯಾವುದೇ ಪ್ರತಿಕ್ರಿಯೆ ಕಾರ್ಯರೂಪಕ್ಕೆ ಬಂದಿಲ್ಲ.
-ಡಾ.ಸುರೇಶ್ ನಾಯಕ್ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಕ್ಕರ್ಣೆಸರ್ಕಾರದ ಮಾನದಂಡಗಳು ಪ್ರಮುಖವಾಗಿದ್ದು ಪಾಲಿಸಬೇಕಾಗುತ್ತದೆ. ಉಪ ಆರೋಗ್ಯ ಕೇಂದ್ರಕ್ಕೆ ಅನುಭವಿ ನರ್ಸ್‌ಗಳು ಲಭ್ಯವಿರುತ್ತಾರೆ. ಈ ಹಿಂದೆ ಪ್ರಸ್ತಾವನೆ ಹೋಗಿರುವುದರಿಂದ ಶಾಸಕರೊಂದಿಗೆ ಮಾತನಾಡಿ, ಸರ್ಕಾರದ ಗಮನಕ್ಕೆ ತರುವಂತೆ ಮಾಡಲಾಗುವುದು. ಶಾಸಕರ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು.
-ಕೋಟ ಸ್ರೀನಿವಾಸ ಪೂಜಾರಿ ಸಂಸದ, ಉಡುಪಿ ಚಿಕ್ಕಮಗಳೂರುನನ್ನ ತಂದೆಯವರು ವಯಸ್ಸಾಗಿರುವುದರಿಂದ ಯಾವುದೇ ವೈದ್ಯಕೀಯ ಚಿಕಿತ್ಸಗೆ ಬರಬೇಕಾದರೆ ಆಟೋ ಮಾಡಿಕೊಂಡು ಬರಬೇಕು. ಇಲ್ಲಿ ಬಂದರೆ ವೈದ್ಯರಿಲ್ಲ. ಆರೋಗ್ಯ ಶುಶ್ರೂಷಕಿ ತಪಾಸಣೆ ನಡೆಸಿ ಮಾತ್ರೆ ನೀಡುತ್ತಾರೆ. ಬುಧವಾರ ಮಾತ್ರ ವೈದ್ಯರು ಕೇಂದ್ರದಲ್ಲಿ ಲಭ್ಯವಿರುತ್ತಾರೆ. ಮನೆ ಭೇಟಿ, ಮೀಟಿಂಗ್ ಮುಂತಾದವು ಇದ್ದರೆ ವಾಪಸ್ ತೆರಳಬೇಕಾಗುತ್ತದೆ. ಕಾಯಂ ವೈದ್ಯರ ಸೇವೆ ದೊರೆಯುವಂತಾಗಲಿ.
-ವಿಜಯೇಂದ್ರ ಕಾಮತ್ ಓಣಿಕಲ್ಲುhttps://www.vijayavani.net/korathi-koragajja-deity-request-letter-released