ಮಂಡ್ಯ: ರಾಜ್ಯದ 7ನೇ ವೇತನ ಶಿಫಾರಸಿನಂತೆ ಶೇ.6ರಷ್ಟು ಸರ್ಕಾರಿ ಅಂಗವಿಕಲ ನೌಕರರಿಗೆ ಪ್ರಯಾಣ ಭತ್ಯೆ ಆದೇಶವನ್ನು ಕೂಡಲೇ ಹೊರಡಿಸುವುದು. ಅಂಗವಿಕಲ ನೌಕರರಿಗೆ ವೇತನ ಆಯೋಗ ನೀಡಿರುವ ಎಲ್ಲ ಶಿಫಾರಸನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ನೌಕರರ ಸಂಘದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅಂಗವಿಕಲ ನೌಕರರು, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಅಂಗವಿಕಲ ವಿದ್ಯಾವಂತ ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯದನ್ವಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಿಂದಿನಿಂದಲೂ ಮೀಸಲಿರಿಸಿದ್ದ ಭರ್ತಿ ಮಾಡದೇ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಂತೆ ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ನಿರುದ್ಯೋಗಿ ಅಂಗವಿಕಲರ ಜೀವನ ನಿರ್ವಹಣೆ ಹಾಗೂ ಸಾಮಾಜಿಕ ಭದ್ರತೆಗಾಗಿ ನೀಡುತ್ತಿರುವ ಪೋಷಣಾ ಭತ್ಯೆಯನ್ನು ತಿಂಗಳಿಗೆ ಕನಿಷ್ಟ 5 ಸಾವಿರ ರೂ.ಗಳನ್ನು ಮಂಜೂರು ಮಾಡಬೇಕು. ಅಂಗವಿಕಲ ವ್ಯಕ್ತಿಗಳ ಅಧಿನಿಯಮ 2016ರ ಅನ್ವಯ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಉಂಟು ಮಾಡುತ್ತಿರುವ ಶೋಷಣೆಯನ್ನು ತಪ್ಪಿಸಲು ಸೂಕ್ತವಾದ ಕಠಿಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಅಂಗವಿಕಲರ ಸಬಲೀಕರಣಕ್ಕಾಗಿ 2016ರ ಅಧಿನಿಯಮದನ್ವಯ ಅಂಗವಿಕಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಂಗವಿಕಲರ ಸಂಪನ್ಮೂಲ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ಒಟ್ಟಾರೆ 14 ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು.
ಸಂಘದ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ, ಅಧ್ಯಕ್ಷ ಬಿ.ಎಸ್.ಶಂಕರಯ್ಯ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಸಿದ್ದರಾಜು, ಬಸವರಾಜು, ಆನಂದ್, ಮಹೇಶ, ನಾಗರಾಜು ಇತರರಿದ್ದರು.
ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸಿ: ಸರ್ಕಾರಿ ಅಂಗವಿಕಲ ನೌಕರರಿಂದ ಮನವಿ ಸಲ್ಲಿಕೆ
You Might Also Like
ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್ ವಿಧಾನ | Health Tips
10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…
ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars
Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…
ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್ ಮಾಡೋದೆ ಇಲ್ಲ | Health Tips
ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…