ನ್ಯೂಯಾರ್ಕ್: ಬಳಕೆದಾರರ ಡೆಟಾ ಸುರಕ್ಷತೆ ಬಗ್ಗೆ ಫೇಸ್ಬುಕ್ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತವೆ. ಇದೀಗ ಇಂತಹದೇ ಮತ್ತೊಂದು ಗಂಭೀರ ಆರೋಪ ಫೇಸ್ಬುಕ್ ಬಗ್ಗೆ ಕೇಳಿ ಬಂದಿದೆ.
ಫೇಸ್ಬುಕ್ನ ಸುಮಾರು 50 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಅಮೆರಿಕದ Hudson Rock cybercrime intelligence firm ಎಂಬ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಎಸ್ಐಟಿ ವಿರುದ್ಧ ಸಿಡಿದೆದ್ದ ಸಿಡಿ ಲೇಡಿ: ವಿಚಾರಣೆ ನಡುವೆಯೇ ಕಮಿಷನರ್ಗೆ ದೂರು ಪತ್ರ ಬರೆದಿದ್ದೇಕೆ?
ಬಳಕೆದಾರರ ಮೊಬೈಲ್ ನಂಬರ್, ಇ ಮೇಲ್ ಐಡಿ ಹಾಗೂ ಖಾಸಗಿ ಮಾಹಿತಿಗಳನ್ನು ಫೇಸ್ಬುಕ್ನಿಂದ ಹ್ಯಾಕರ್ಗಳು ಕದ್ದಿದ್ದಾರೆ ಎಂದು Hudson Rock ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಅಲೋನ್ ಗಲ್ ಇತ್ತೀಚೆಗೆ ಹೇಳಿದ್ದಾರೆ. ಇದು ಖಂಡಿತವಾಗಿಯೂ ಫೇಸ್ಬುಕ್ನ ನಿರ್ಲಕ್ಷ್ಯದಿಂದ ಆಗಿರುವ ದುರ್ಘಟನೆ ಎಂದು ಅವರು ಆರೋಪಿಸಿದ್ದಾರೆ.
ಆದರೆ ಅಲೋನ್ ಗಲ್ ಅವರ ಆರೋಪವನ್ನು ಫೇಸ್ಬುಕ್ ನಿರಾಕರಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಲೊನ್ ಗಲ್ ಹೇಳುವ ಆರೋಪ, ಅದು 2019 ಕ್ಕೆ ಸಂಬಂಧಿಸಿದ ಆರೋಪವಾಗಿದೆ. ಇದರಲ್ಲೇನು ಹೊಸತಿಲ್ಲ. ಆದರೆ, ಫೇಸ್ಬುಕ್ನ ಬಳಕೆದಾರರ ಮಾಹಿತಿ ಸೋರಿಕೆಯಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಪ್ರಿಯಕರನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್ ಕಮೋಡ್ನಲ್ಲಿ ಬೀಸಾಡಿ ಪೊಲೀಸರಿಗೆ ಶರಣಾದ ಪ್ರೇಯಸಿ!