ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಲಿ

1 Min Read
ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಲಿ
ಕೂಡ್ಲಿಗಿಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಋತುಚಕ್ರ ನೈರ್ಮಲ್ಯ ದಿನಾಚರಣೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಸುನೀತಾ ಮಾತನಾಡಿದರು. ದಂತ ವೈದ್ಯೆ ರಮ್ಯಾ, ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಿ.ಗಿರಿಜಾ, ಆಪ್ತ ಸಮಾಲೋಚಕರಾದ ಓಬಣ್ಣ, ಎಂ. ನಾಗರತ್ನಾ, ಆಶಾ ಕಾರ್ಯಕರ್ತೆಯರಾದ ಮೇಲ್ವೀಚಾರಕಿ ಸಾವಿತ್ರಮ್ಮ, ಉಮಾ, ಲತಾ, ಅಂಗನವಾಡಿ ಶಿಕ್ಷಕಿ ಮಹಾಂತಮ ್ಮಇತರರಿದ್ದರು.

ಕೂಡ್ಲಿಗಿ: ಕಿಶೋರಿಯರಿಗೆ ಹದಿಹರೆಯದಲ್ಲಿ ದೈಹಿಕವಾಗಿ ಮಹತ್ತರ ಬದಲಾವಣೆ ಆಗುವುದು ಸಹಜ ಕ್ರಿಯೆ ಎಂದು ತಾಲೂಕು ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಸುನೀತಾ ಹೇಳಿದರು.

ಪಟ್ಟಣದ ಆಜಾದ್ ನಗರದ ಅಂಗನವಾಡಿ ಎ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ತಾಲೂಕು ಆಸ್ಪತ್ರೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಋತುಚಕ್ರ ನೈರ್ಮಲ್ಯ ದಿನಾಚರಣೆಯಲ್ಲಿ ಮಾತನಾಡಿದರು. ಋತುಚಕ್ರ ಎನ್ನುವುದು ನಿಸರ್ಗದತ್ತ ಸಹಜ ದೈಹಿಕ ಕ್ರಿಯೆಯಾಗಿದೆ.

ಇದನ್ನು ಓದಿ:ಪೌರಕಾರ್ಮಿಕರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಲಿ: ಜಿಲ್ಲಾಧಿಕಾರಿ ವೈಶಾಲಿ

ಭಯಪಡದೆ, ಅರಿವು ಅಗತ್ಯವಾಗಿದೆ ಎಂದರು. ಋತುಚಕ್ರದ ವೇಳೆ ಕಿಶೋರಿಯರನ್ನು ದೂರವಿಡುವ ಸಂಪ್ರದಾಯ ಕೆಲ ಕುಟುಂಬಗಳಲ್ಲಿ ಇನ್ನೂ ಇದೆ. ಇಂತಹ ಸಮಯದಲ್ಲಿ ಮನೆಯವರು ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಬದಲಿಗೆ ಅವರನ್ನು ಬೇರೆ ಕೋಣೆಯಲ್ಲಿರಿಸುವುದು ಸರಿಯಲ್ಲ.

ಮುಟ್ಟಿನ ವೇಳೆ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಹಿಂದಿನ ಪದ್ಧತಿಯಂತೆ ಬಟ್ಟೆಯನ್ನು ಬಳಸದೆ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವ ಸ್ಯಾನಿಟರಿ ಪ್ಯಾಡ್‌ಗಳನ್ನು ಉಪಯೋಗಿಸಬೇಕು. ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.

See also  ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಿ
Share This Article