ದಾವಣಗೆರೆ: ಸಾಲದ ಆಸೆಗೆ ಬಿದ್ದ ಕಾರ್ಮಿಕನೊಬ್ಬ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಸಾಲ ಕೊಡಿಸುವ ನೆಪದಲ್ಲಿ ದೆಹಲಿಯ ಫೈನಾನ್ಸ್ ಕಂಪನಿಯೊಂದರ ಹೆಸರು ಹೇಳಿ ಕರೆ ಮಾಡಿದ ಅಪರಿಚಿತ ವ್ಯಕ್ತಿ, ವಿನೋಬನಗರದ ಕಾರ್ಮಿಕನ ಖಾತೆಯಿಂದ 1,21,024 ರೂ. ಲಪಟಾಯಿಸಿದ ಪ್ರಕರಣ ಸಿಇಎನ್ ಅಪರಾಧ ಠಾಣೆಯಲ್ಲಿ ಶನಿವಾರ ದಾಖಲಾಗಿದೆ.

ದಾವಣಗೆರೆ ಟಾರ್ಪಲಿನ್‌ನಲ್ಲಿ ಕೆಲಸ ಮಾಡುತ್ತಿರುವ ಎ.ವಿ. ಮಹೇಂದ್ರರಾವ್ ಮೋಸ ಹೋದವರು. ಜು.19ರಂದು ಕರೆ ಮಾಡಿದ ಅಪರಿಚಿತನೊಬ್ಬ ಸಾಲ ಕೊಡಿಸುವ ನೆಪದಲ್ಲಿ ಎಲ್ಲ ದಾಖಲಾತಿ ಪಡೆದಿದ್ದಲ್ಲದೆ ಸುರಕ್ಷತಾ ಠೇವಣಿ ರೂಪದಲ್ಲಿ ಹಣ ಹಾಕುವಂತೆ ಹೇಳಿ ವಿವಿಧ ದಿನಾಂಕಗಳಂದು ಹಣ ಹಾಕಿಸಿಕೊಂಡಿದ್ದಾನೆ. ಅಲ್ಲದೆ ಬ್ಯಾಂಕ್ ಕಮಿಷನ್ ಹಣ ನೀಡುವಂತೆ ಕೆಲವು ಕಾಲ ಪೀಡಿಸಿದ್ದ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.‘
ಆನ್ಲೈನ್ನಲ್ಲಿ ಗೋಣಿಚೀಲ ಖರೀದಿಸಲು ಹೋಗಿ 1.13 ಲಕ್ಷ ರೂ. ಕಳೆದುಕೊಂಡ ಶಿಕ್ಷಕಿ!
ರಾಜ್ಯದಲ್ಲಿ ಇನ್ನೂ ಎರಡು ವಾರ ನೈಟ್ ಕರ್ಫ್ಯೂ; ಕರೊನಾ ಆತಂಕ ಹೆಚ್ಚಳ, ಮತ್ತಷ್ಟು ಕಟ್ಟುನಿಟ್ಟು…