Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಭೂ ಮಾಲೀಕರಿಗಿನ್ನಿಲ್ಲ ಒತ್ತುವರಿ ಆತಂಕ

Saturday, 16.06.2018, 3:04 AM       No Comments

|ಬೇಲೂರು ಹರೀಶ

ಬೆಂಗಳೂರು: ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕರ ಆಸ್ತಿಗಳ ಒತ್ತುವರಿಗೆ ಇನ್ನು ಮುಂದೆ ಶಾಶ್ವತವಾಗಿ ಬ್ರೇಕ್ ಬೀಳಲಿದೆ. ಈ ಉದ್ದೇಶ ಈಡೇರಿಕೆಗಾಗಿಯೇ ಕಂದಾಯ ಇಲಾಖೆಯು ನಗರ ಆಸ್ತಿ ಮಾಲೀಕತ್ವದ ದಾಖಲೆ ಯೋಜನೆ ಜಾರಿಗೆ (ಯುಪಿಓಆರ್) ತಂದಿದೆ. ಆಸ್ತಿದಾರರಿಗೆ ಇನ್ಮುಂದೆ ಡಿಜಿಟಲ್ ಆಸ್ತಿ ಕಾರ್ಡ್ ಸಿಗಲಿದ್ದು, ಮನೆ ಬಾಗಿಲಿಗೇ ಬರಲಿದೆ.

ಕಂದಾಯ ಇಲಾಖೆಯ ಅಧೀನದಲ್ಲಿರುವ ಭೂಮಾಪನ ಇಲಾಖೆಯು ಈಗಾಗಲೇ ಮೈಸೂರು, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಈ ಯುಪಿಓಆರ್ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಶೀಘ್ರದಲ್ಲೇ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಿದೆ. ಕಾರ್ಡ್ ವಿತರಣೆಗಾಗಿಯೇ ಇಲಾಖೆಯಿಂದ 100 ಸರ್ವೆ ಅಧಿಕಾರಿಗಳನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ಪ್ರತಿನಿತ್ಯ 10 ಸಾವಿರ ಆಸ್ತಿ ಕಾರ್ಡ್​ಗಳನ್ನು ಮನೆ ಮನೆಗೆ ತಲುಪಿಸುವ ಗುರಿ ಅವರಿಗೆ ನೀಡಲಾಗಿದೆ. ಈ ಮೂಲಕ ಭೂಗಳ್ಳರಿಂದ ಸಾರ್ವಜನಿಕರ ಆಸ್ತಿಗಳಿಗೆ ರಕ್ಷಣೆ ಸಿಗುತ್ತದೆ ಎಂದು ಇಲಾಖೆಯ ಆಯುಕ್ತ ಮನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಏನಿದು ಯುಪಿಓಆರ್?: ಸಾರ್ವಜನಿಕರ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಜಾಗವನ್ನು ಭೂಗಳ್ಳರಿಂದ ರಕ್ಷಿಸಲು ಕಂದಾಯ ಇಲಾಖೆಯು ನಗರದಲ್ಲಿರುವ ಎಲ್ಲ ಆಸ್ತಿ ಮಾಲೀಕತ್ವದ ದಾಖಲೆ ಒಳಗೊಂಡ ಕಾರ್ಡ್ ನೀಡುವ ಯೋಜನೆ(ಯುಪಿಓಆರ್) ಇದಾಗಿದೆ. ಹಳ್ಳಿ ಪ್ರದೇಶಗಳನ್ನು ಹೊರತುಪಡಿಸಿ ನಗರದಲ್ಲಿರುವ ಖಾಲಿ ನಿವೇಶನ, ಕಟ್ಟಡ, ವಾಸದ ಮನೆಗಳನ್ನು ಅಧಿಕಾರಿಗಳು ಇಟಿಎಸ್ ಮತ್ತು ಡಿಜಿಪಿಎಸ್ ಉಪಕರಣಗಳ ಮೂಲಕ ಅಳತೆ ಮಾಡಿ, ಮಾಲೀಕರ ಹೆಸರು, ಆಸ್ತಿಯ ಸ್ವರೂಪ, ಮ್ಯುಟೇಷನ್ ಸಂಖ್ಯೆ ಸೇರಿ ಕಾಪೋರೇಷನ್, ಮುಡಾ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿ ನೀಡಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡೇಟಾ ಎಂಟ್ರಿ ಮಾಡಲಾಗುತ್ತದೆ. ಅಲ್ಲದೆ, ಇದರಲ್ಲಿ ಏನಾದರೂ ತಪು್ಪಗಳಿದ್ದರೆ ಅವುಗಳನ್ನು ಸರಿಪಡಿಸಿ ಅಂತಿಮವಾಗಿ ಆಸ್ತಿ ಕಾರ್ಡ್​ನಲ್ಲಿ ನಗರಾಸ್ತಿದಾರರ ಯೂನಿಕ್ ನಂಬರ್​ಗಳನ್ನು ನಮೂದಿಸಿ ಡಿಜಿಟಲ್ ಆಸ್ತಿ ಕಾರ್ಡ್ ನೀಡಲಾಗುತ್ತದೆ. ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಈ ಕಾರ್ಡ್​ನಲ್ಲಿ ಅಡಕಗೊಳಿಸಲಾಗಿರುತ್ತದೆ.

ನಕಲು ಸೃಷ್ಟಿ: ರಾಜ್ಯದಲ್ಲಿ ಆಸ್ತಿ ಅಳತೆ, ನಕ್ಷೆ ರಚಿಸಲು ನಗರ ಸಮೀಕ್ಷೆ ಎಂಬ ಯೋಜನೆಯನ್ನು 2010ರಲ್ಲಿ ಕಂದಾಯ ಇಲಾಖೆ ಜಾರಿಗೆ ತಂದಿತ್ತು. ರಾಜ್ಯದ ಅಂದಾಜು 48 ನಗರಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ನಿವೇಶನ, ಖಾಲಿ ಜಾಗಗಳನ್ನು ಅಳತೆ ಮಾಡಿ ಮಾಲೀಕರ ಪೂರ್ಣ ಮಾಹಿತಿ ನಮೂದಿಸಿ ಪತ್ರವನ್ನು ವಿತರಿಸಲಾಗುತ್ತಿತ್ತು. ಆದರೆ, ಭೂ ಒತ್ತುವರಿದಾರರು ಕಂದಾಯ ಇಲಾಖೆ ನೀಡುವ ದಾಖಲೆಯನ್ನೇ ನಕಲು ಸೃಷ್ಟಿಸಲು ಆರಂಭಿಸಿದ್ದರು. ಈ ಬಗ್ಗೆ ಇಲಾಖೆಗೆ ಸಾಕಷ್ಟು ದೂರುಗಳು ಬರುತ್ತಿದ್ದವು. ಅದನ್ನು ತಪ್ಪಿಸಲು ಇಲಾಖೆಯು ಹೊಸದಾಗಿ ನಗರ ಆಸ್ತಿ ಮಾಲೀಕತ್ವದ ದಾಖಲೆ ಯೋಜನೆ ಜಾರಿಗೆ ತಂದಿದೆ.

3 ಜಿಲ್ಲೆಗಳಲ್ಲಿ ಅನುಷ್ಠಾನ: ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಪ್ರಕಾರ ಕಂದಾಯ ಇಲಾಖೆಯು ನಗರ ಆಸ್ತಿ ಮಾಲೀಕತ್ವದ ದಾಖಲೆ ಯೋಜನೆಯಡಿ ಈಗಾಗಲೇ ಮೈಸೂರಿನಲ್ಲಿ 1.56 ಲಕ್ಷ, ಶಿವಮೊಗ್ಗದಲ್ಲಿ 59000 ಮತ್ತು ಮಂಗಳೂರಿನಲ್ಲಿ 30500 ನಗರಾಸ್ತಿಗಳಿಗೆ ಡಿಜಿಟಲ್ ಆಸ್ತಿ ಕಾರ್ಡ್ ನೀಡಲಾಗಿದೆ. ಇದರಲ್ಲಿ ಕೆಡಸ್ಟ್ರಲ್ ನಕ್ಷೆ, ಆಸ್ತಿ ಮಾಲೀಕತ್ವ, ಭದ್ರತಾ ಹೊಣೆ ಮತ್ತಿತರ ವಿವರಗಳನ್ನು ನಮೂದಿಸಲಾಗಿದೆ. ಈ ಹೊಸ ಯೋಜನೆಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಆಸ್ತಿಗಳ ವಿಂಗಡಣೆ

ಈ ಹೊಸ ಯೋಜನೆಯಲ್ಲಿ ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕರ ಆಸ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿ ವಿಂಗಡಣೆ ಮಾಡಲಾಗುತ್ತದೆ. ಅಧಿಕಾರಿಗಳು ಜಾಗವನ್ನು ಸರ್ವೆ ಮಾಡುವ ವೇಳೆ ಅಕ್ಕಪಕ್ಕದ ಜಾಗ, ರಸ್ತೆ, ಮಾಲೀಕರ ಹೆಸರು, ಅದರ ಸ್ವರೂಪ ಸೇರಿ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸಿ ಆನ್​ಲೈನ್​ನಲ್ಲಿ ನಮೂದಿಸಿದ ಬಳಿಕ ಡಿಜಿಟಲ್ ಆಸ್ತಿ ಕಾರ್ಡ್​ಗಳನ್ನು ಮಾಲೀಕರ ಮನೆಗೇ ತಲುಪಿಸಲಾಗುತ್ತದೆ ಎಂದು ಭೂ ದಾಖಲೆಗಳ ಜಂಟಿ ನಿರ್ದೇಶಕ ಸಿ.ಎಸ್.ರಮೇಶ್ ವಿವರಿಸಿದರು.

ಜುಲೈನಿಂದ ಬೆಂಗಳೂರಲ್ಲಿ ಜಾರಿ

ಜುಲೈ ತಿಂಗಳಿಂದ ಬೆಂಗಳೂರಿನ ಜಯನಗರದ 4ನೇ ಬ್ಲಾಕ್​ನಿಂದ ಮನೆ ಸರ್ವೆ ಕಾರ್ಯಾರಂಭ ಮಾಡಲು ಕಂದಾಯ ಇಲಾಖೆ ನಿರ್ಧರಿಸಿದೆ. ಜಯನಗರದಲ್ಲಿ 6 ಲಕ್ಷ ಮನೆ ಸೇರಿ ನಗರದಾದ್ಯಂತ 23 ಲಕ್ಷ ವಾಸದ ಮನೆಗಳು ಇವೆ. ಬೆಂಗಳೂರಲ್ಲಿ ಸಮರ್ಪಕವಾಗಿ ಯೋಜನೆ ಜಾರಿಗಾಗಿಯೇ ಇಲಾಖೆಯಿಂದ 40 ಸರ್ವೆ ಅಧಿಕಾರಿಗಳನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ.

ಸಾರ್ವಜನಿಕರ ಆಸ್ತಿಯನ್ನು ಭೂಗಳ್ಳರಿಂದ ರಕ್ಷಿಸಲು ಈ ಯೋಜನೆ ಜಾರಿಗೆ ತಂದಿದ್ದು, ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿ ಡಿಜಿಟಲ್ ಆಸಿ ್ತಾರ್ಡ್​ಗಳನ್ನು ಮನೆಮನೆಗೆ ತಲುಪಿಸಲಾಗುತ್ತಿದೆ. ಬರುವ ದಿನಗಳಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು.

| ಮನೀಶ್ ಮೌದ್ಗಿಲ್, ಆಯುಕ್ತ, ಕಂದಾಯ ಇಲಾಖೆ

Leave a Reply

Your email address will not be published. Required fields are marked *

Back To Top