ಅಭಿನಯ ಕಾರ್ಯಾಗಾರ

ಮೈಸೂರು: ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಮಾ.10ರಂದು ಸ್ವಿಟ್ಜರ್‌ಲೆಂಡ್ ರಂಗತಜ್ಞರಿಂದ ಅಭಿನಯ ಕಾರ್ಯಾಗಾರ ನಡೆಯಲಿದೆ.

ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು, ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆ ಸಾಧಿಸುವುದರತ್ತ ಸತತವಾಗಿ ಪ್ರಯತ್ನಶೀಲವಾಗಿದೆ. ತನ್ನ ಚಟುವಟಿಕೆಯ ಭಾಗವಾಗಿ ನಟನ ರಂಗಶಾಲೆಯಲ್ಲಿ ಅಂದು ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಸ್ವಿಟ್ಜರ್‌ಲೆಂಡ್‌ನ ಓಟ್ಟೋ ಹ್ಯೂಬರ್ ಅವರಿಂದ ರಂಗನಟನೆಯಲ್ಲಿ ದೇಹದ ಬಳಕೆ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ.

ಸ್ವಿಟ್ಜರ್‌ಲೆಂಡಿನ ಓಟ್ಟೋ ಹ್ಯೂಬರ್, ಜಾಗತಿಕ ರಂಗಭೂಮಿಯ ವಿವಿಧ ಆಯಾಮಗಳಲ್ಲಿ ನಟ, ನಿರ್ದೇಶಕ, ಸುಗುಮಕಾರ ಹಾಗೂ ರಂಗತರಬೇತಿದಾರರಾದ್ದಾರೆ. ಈ ಕ್ಷೇತ್ರದಲ್ಲಿ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಿಟ್ಜರ್‌ಲೆಂಡ್, ಜರ್ಮನಿ, ಇಟಲಿ, ಕ್ರೋಯೇಷಿಯಾ, ಆಫ್ರಿಕಾ, ಶ್ರೀಲಂಕಾ ಇತ್ಯಾದಿ ದೇಶಗಳ ರಂಗಕಲಾವಿದರಿಗೆ ತರಬೇತಿ ನೀಡಿದ್ದಾರೆ. ಓಟ್ಟೋ ಹ್ಯೂಬರ್ ಅವರ ರಂಗಾನುಭವವನ್ನು ಕಲಾವಿದರಿಗೆ ಹಂಚುವ ಸಲುವಾಗಿ ಪ್ರತಿಷ್ಠಿತ ರಂಗ ಸಂಸ್ಥೆಯಾದ ನಟನ ಕಾರ್ಯಾಗಾರ ಹಮ್ಮಿಕೊಂಡಿದೆ.
ಓಟ್ಟೋ ಹ್ಯೂಬರ್ ಅವರ ರಂಗಾನುಭವವನ್ನು ಪಡೆದುಕೊಳ್ಳಲು ನಟನ ಸಂಸ್ಥೆಯ ವಿದ್ಯಾರ್ಥಿಗಳಲ್ಲದೆ, ಇತರ ಆಸಕ್ತರಿಗೂ ಅವಕಾಶವಿದ್ದು ಭಾಗವಹಿಸುವವರು ಮೊ.9945555570, 9480468327, 9900349093 ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.