ಪೆರ್ಡೂರು ಬಸ್ ಕಂಡಕ್ಟರ್ ಹತ್ಯೆ

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿ ಪೆರ್ಡೂರು, ಬೈರಂಪಳ್ಳಿ ಎಂಬಲ್ಲಿ ಖಾಸಗಿ ಬಸ್ ಕಂಡಕ್ಟರ್ ಒಬ್ಬರನ್ನು ಕೊಲೆ ಮಾಡಲಾಗಿದೆ. ಪ್ರಶಾಂತ್ ಪೂಜಾರಿ (38) ಕೊಲೆಯಾದವರು‌.

ಗುರುವಾರ ರಾತ್ರಿ 12-1 ಗಂಟೆ ಪ್ರಶಾಂತ್ ಅವರ ಮನೆಗೆ ಬಂದ ಇಬ್ಬರು ಪ್ರಶಾಂತ್ ಅವರೋಡನೆ ಜಗಳ ಮಾಡಿ ಮನೆಯ ಆವರಣದಲ್ಲೇ ಕತ್ತಿಯಿಂದ ಕುಯ್ದು ಪ್ರಶಾಂತ್ ಅವರನ್ನು ಕೊಲೆ ಮಾಡಲಾಗಿದೆ. ಆರೋಪಿಗಳು ಯಾರು ಎಂದು ತಿಳಿದು ಬಂದಿಲ್ಲ,ಮೇಲ್ನೋಟಕ್ಕೆ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ.

ಹತ್ಯೆಯಾದ ಪ್ರಶಾಂತ್ ಅವರಿಗೆ ಪರಿಚಯದವರೇ ಆದವರು ಕೊಲೆ ಮಾಡಿರಬಹುದು. ತನಿಖೆ ಪ್ರಗತಿಯಲ್ಲಿದ್ದೂ, ಆರೋಪಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ . ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *