ಪೆರ್ಡೂರಿನಲ್ಲಿ ಮದುಮಕ್ಕಳ ಜಾತ್ರೆ

ಉಡುಪಿ: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಶನಿವಾರ ಸಿಂಹ ಸಂಕ್ರಮಣ ಉತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದರು.

ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಸರತಿಯಲ್ಲಿ ನಿಂತ ಭಕ್ತರು ಅನಂತನ ದರ್ಶನ ಪಡೆದು ಕೃತಾರ್ಥರಾದರು. ದೇವಳದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ದೇವರಿಗೆ ಪೂಜೆ, ಅಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಈ ಉತ್ಸವ ಮದುಮಕ್ಕಳ ಜಾತ್ರೆಯೂ ಎಂದು ಹೆಸರು ಪಡೆದಿದ್ದು, ನವ ವಧುವರರು ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಾಳೆಹಣ್ಣಿಗೊಲಿವ ದೇವರು ಎಂದೇ ಖ್ಯಾತಿಯ ಪಡೆದ ಶ್ರೀ ಅನಂತ ದೇವರಿಗೆ ಸಿಂಹ ಸಂಕ್ರಮಣ ಪ್ರಯುಕ್ತ ಭಕ್ತರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ರೂಪದಲ್ಲಿ ಬಾಳೆಹಣ್ಣು ಸಮರ್ಪಣೆಯಾಯಿತು. ಉಡುಪಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ದ.ಕ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಮಾಡಿದರು.

Leave a Reply

Your email address will not be published. Required fields are marked *