ರಾಜಕೀಯಕ್ಕೆ ತದ್ವಿರುದ್ಧ ಪ್ರಜಾಕೀಯ ಪಕ್ಷ, ಇಲ್ಲಿ ಜನ ಗೆಲ್ಲಬೇಕು ಎಂದು ನಟ ಉಪೇಂದ್ರ ಹೇಳಿದ್ದೇಕೆ?

ಮೈಸೂರು: ರಾಜಕಾರಣ ಬ್ಯುಸಿನೆಸ್ ಆಗಿದೆ. ಅದನ್ನು ಬದಲಾವಣೆ ಮಾಡುವುದು ನಮ್ಮ ಪಕ್ಷದ ಉದ್ದೇಶ ಎಂದು ನಟ, ಉತ್ತಮ ಪ್ರಜಾಕೀಯ ಪಕ್ಷದ ಮುಖಂಡ ಉಪೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದರ್ ತೆರೇಸಾ ಥರ ಸೇವೆ ಮಾಡುವುದು ನಮ್ಮ ಪಕ್ಷ. ವ್ಯಾಪಾರೀಕರಣದಿಂದ ರಾಜಕಾರಣ ತೆಗೆಯುವ ಕೆಲಸ ಮಾಡುತ್ತೇವೆ. ಜನರು ವಿಚಾರ ಮಾಡಿ ವೋಟು ಹಾಕಬೇಕು. ಪಾರದರ್ಶಕ ಆಡಳಿತ ಬರಬೇಕು. 500, 1000 ವೋಟ್ ಕೊಡಲಿ. ನಾವು ಮತ್ತೆ ಮತ್ತೆ ಪ್ರಯತ್ನಿಸುತ್ತೇವೆ. ಮುಂದಿನ ಪೀಳಿಗೆಗೆ ನಾವು ಈ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದರು.

ಗೆಲುವು ಸೋಲು ಇದ್ದೇ ಇರುತ್ತದೆ. ಸ್ಪರ್ಧೆ ಮಾಡುವುದೇ ಗೆಲುವಿಗೆ. ಜನ ಬಹಳ ಬುದ್ಧಿವಂತರು. ಇನ್ನು ಮುಂದೆ ನಿಜವಾದ ಮತದಾರರು ಬರುತ್ತಾರೆ. ಸತ್ಯ ಎಂಬುದು ಜನರಿಗೆ ಒಂದಲ್ಲ ಒಂದು ದಿನ ಗೊತ್ತಾಗುತ್ತದೆ. ಜಾತಿ ಭೇದ ಮಾಡುವುದು ಬ್ರಿಟಿಷರಿಂದ ಕಲಿತಿದ್ದು. ರಾಜಕೀಯಕ್ಕೆ ತದ್ವಿರುದ್ಧವಾದ ಪಕ್ಷ ಪ್ರಜಾಕೀಯ ಪಕ್ಷ. ನಮ್ಮ ಪಕ್ಷದಲ್ಲಿ ನಾವು ಗೆಲ್ಲುವುದಲ್ಲ ಜನ ಗೆಲ್ಲಬೇಕು. 5 ಸಾವಿರ ಜನ ವೋಟ್ ಹಾಕಿದರೆ 5 ಸಾವಿರ ಜನರೂ ಗೆದ್ದ ಹಾಗೆ ಎಂದು ಹೇಳಿದರು.

ಈಗಾಗಲೇ 14 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. 28 ಕ್ಷೇತ್ರಗಳ ಪೈಕಿ ಉಳಿದ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)