More

    ಜನತಾ ದರ್ಶನಕ್ಕೆ ಭಾರೀ ಜನ ಸ್ಪಂದನ

    ಸಾರ್ವಜನಿಕರಿಂದ ೯೯೨ ಅಹವಾಲುಗಳು ಸಲ್ಲಿಕೆಗೆ

    ಹೊಸಪೇಟೆ: ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಜನತಾ ದರ್ಶನ ಕಾರ್ಯಕ್ರಮವನ್ನು ಪ್ರತೀ ತಿಂಗಳು ನಿಗದಿತ ದಿನದಂದು ಆಯೋಜಿಸಬೇಕು. ಇದರಿಂದ ಜನರ ಸಮಸ್ಯೆಗಳ ನಿವಾರಣೆ ಜತೆಗೆ ಆಡಳಿತ ಸುಧಾರಣೆಗೂ ನೆರವಾಗುತ್ತದೆ ಎಂದು ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟರು.


    ಜಿಲ್ಲಾಡಳಿತ, ಜಿ.ಪಂ. ಸಹಯೋಗದಲ್ಲಿ ನಗರದ ಜಿಲ್ಲಾ ಒಳಂಗಣ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಶಕಗಳ ಹಿಂದೆ ರಾಮಕೃಷ್ಣ ಹೆಗಡೆ ಅವರು ಆರಂಭಿಸಿದ್ದರು. ಆನಂತರ ಉಪ ಮುಖ್ಯಮಂತ್ರಿಯಾಗಿ ಎಂ.ಪಿ.ಪ್ರಕಾಶ ಕೂಡ ಅವರ ಕಾಲದಲ್ಲಿ ನಡೆಸಿದ್ದರು. ಇದೀಗ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲೆಯಲ್ಲಿ ಏಕಕಾಲದಲ್ಲಿ ಜನತಾ ದರ್ಶನ ಆರಂಭಿಸಿರುವುದು ಐತಿಹಾಸಿಕ ಹೆಜ್ಜೆಯಾಗಿದೆ. ಇದನ್ನು ಪ್ರತೀ ತಿಂಗಳು ದಿನಾಂಕವನ್ನು ನಿಗದಿಗೊಳಿಸಬೇಕು. ಭಾನುವಾರ, ಸರ್ಕಾರ ರಜೆಯಿದ್ದಾಗಲೂ ಜನತಾ ದರ್ಶನ ಆಯೋಜಿಸಬೇಕು. ಅದನ್ನು ತಾಲೂಕು ಮಟ್ಟಕ್ಕೂ ವಿಸ್ತರಿಸಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ತಿಳಿಸಿದರು.


    ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನಮೂದಿಸಿ ಮೊಬೈಲ್ ಮೂಲಕ ಅರ್ಜಿದಾರರನ್ನು ಸಂಪರ್ಕಿಸಿ ಪರಿಹಾರಒದಗಿಸಲಾಗುತ್ತದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಈಗಾಗಲೇ ನಾಲ್ಕು ಗ್ಯಾರೆಂಟಿಗಳನ್ನು ಈಡೇರಿಸಿದೆ. ಈಡೇರಿಕೆ ಮಾತ್ರ ಬಾಕಿಯಿದ್ದು, ಅದನ್ನೂ ಆದಷ್ಟು ಬೇಗ ಅದನ್ನೂ ಈಡೇರಿಸಲಿದೆ ಎಂದು ಭರವಸೆ ನೀಡಿದರು.

    ೯೯೨ ಅರ್ಜಿ ಸ್ವೀಕಾರ:
    ಜನತಾ ದರ್ಶನದ ನಿಮಿತ್ತ ಇಲ್ಲಿನ ಜಿಲ್ಲಾ ಒಳಂಗಣ ಕ್ರೀಡಾಂಗಣದಲ್ಲಿ ಕಂದಾಯ ಇಲಾಖೆ ಸೇರಿದಂತೆ ಭೂದಾಖಲೆ, ಆಹಾರ ಮತ್ತು ನಾಗರಿಕ ಸರಬರಾಜು, ಮಜೂರಿ, ಜಿಲ್ಲಾ ನೋಂದಣಿ, ಗ್ರಾಮೀಣಾಭಿವೃದ್ಧಿ, ಗ್ರಾಮೀಣಕುಡಿಯುವ ನೀರು ಸರಬರಾಜು, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆ, ಅರಣ್ಯ, ಅಬಕಾರಿ, ಗಣಿ ಮತ್ತು ಭೂವಿಜ್ಞಾನ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ಇಲಾಖಾವಾರು ೨೦ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಬೆಳಗ್ಗೆ ೧೦ ರಿಂದ ಸಂಜೆ ವರೆಗೆ ಒಟ್ಟು ೯೯೨ ಅಹವಾಲುಗಳು ಸಲ್ಲಿಕೆಯಾಗಿವೆ. ಈ ಪೈಕಿ ಕಂದಾಯ ಇಲಾಖೆಯ ೧೫೪, ನಗರಸಭೆಗೆ ಸಂಬAಧಿಸಿ ೫೨೦ ಅರ್ಜಿಗಳು ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಸಾಮಾಜಿಕ ಭದ್ರತಾ ಯೋಜನೆ, ವಸತಿ ಬೇಡಿಕೆಗೆ ಸಂಬAಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜನತಾ ದರ್ಶನಕ್ಕೆ ಭಾರೀ ಜನ ಸ್ಪಂದನ

    ಹಂಪಿ ಜನರಿಗೆ ಜಮೀರ್ ಅಭಯ:
    ಹಂಪಿ ನಿವಾಸಿಗಳ ಅಹವಾಲು ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಹಂಪಿ ಜನರ ಸದ್ಯದ ಪರಿಸ್ಥಿತಿ ನನಗೆ ಚೆನ್ನಾಗಿ ಗೊತ್ತಿದೆ. ಆದರೆ, ಪ್ರಕರಣ ಹೈಕೋರ್ಟ್ನಲ್ಲಿದ್ದು, ಹಂಪಿಯ ವಸ್ತುಸ್ಥಿತಿ ಕುರಿತು ಜಿಲ್ಲಾಡಳಿತದ ಮೂಲಕ ಮನವರಿಕೆ ಮಾಡಿಕೊಡಲಾಗುತ್ತದೆ. ಅ.೩ ರಂದು ತೀರ್ಪು ಬರಲಿದೆ. ಅಲ್ಲಿವರೆಗೆ ಹೋಂ ಸ್ಟೇಗಳನ್ನು ಹೊರತುಪಡಿಸಿ, ಇನ್ನುಳಿದಂತೆ ಎಲ್ಲ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತಕ್ಕೆ ಸೂಚಿಸುವುದಾಗಿ ತಿಳಿಸಿದರು.
    ಅದಕ್ಕೆ ಒಪ್ಪದ ಹಂಪಿ ನಿವಾಸಿಗಳು ಹೋಂ ಸ್ಟೇ ನಮ್ಮ ಜೀವನಾಧಾರವಾಗಿದೆ ಎಂದು ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸರು ತರಾತುರಿಯಲ್ಲಿ ಅರ್ಜಿದಾರರನ್ನು ಹೊರಗೆ ಕಳುಹಿಸಿದರು.

    ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ, ಎಂ.ಪಿ. ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ದಿವಾಕರಎಂ.ಎಸ್., ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಆರ್‌ಎಫ್‌ಓ ಅರ್ಸಲನ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿ ನೋಂಗ್ಡಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts