ಹಳ್ಳದ ನೀರು ಹರಿಯುವಂಗ್ ಮಾಡ್ರಿ

Latest News

ಬೆಂಗಳೂರಿಗೆ ಇನ್ನೊಂದು ರೈಲು

ಶ್ರವಣ್‌ಕುಮಾರ್ ನಾಳ ಪುತ್ತೂರು ಅಗತ್ಯವಿರುವ 2ಪ್ರದೇಶಗಳಿಗೆ ಅಥವಾ ಬೃಹತ್ ನಗರದಿಂದ ಸಣ್ಣ ಪಟ್ಟಣಗಳಿಗೆ ವೇಗವಾಗಿ ಸಂಪರ್ಕಿಸಲು ನೆರವಾಗುವ ಉದ್ದೇಶದಿಂದ ತುಮಕೂರು-ಯಶವಂತಪುರ ಸೇರಿ ದೇಶದಲ್ಲಿ 10 ಸೇವಾ ಸರ್ವೀಸ್...

ಕ್ರಿಕೆಟಲ್ಲೂ ಹನಿಟ್ರ್ಯಾಪ್!

ಬೆಂಗಳೂರು: ‘ಸಭ್ಯರ ಕ್ರೀಡೆ’ ಕ್ರಿಕೆಟ್​ಗೆ ಬೆಟ್ಟಿಂಗ್ ದಂಧೆಯ ಕಳಂಕ ಮೆತ್ತಿದ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಹಿಂದೆ ಹನಿಟ್ರಾ್ಯಪ್ ಅಪಸವ್ಯವೂ ಕಾಣಿಸಿಕೊಂಡಿದೆ. ಮ್ಯಾಚ್ ಫಿಕ್ಸಿಂಗ್​ನಲ್ಲಿ ಸಿಕ್ಕಿಬಿದ್ದ ಆಟಗಾರರನ್ನು...

ಜೋಡಿ ಕೊಲೆ ಆರೋಪಿ ಸೆರೆ

ಈಶ್ವರಮಂಗಲ: ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಜಲಾಡಿ ಸಮೀಪದ ಹೊಸಮಾರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್...

ಕೆಪಿಎಸ್​ಸಿ ​ಸಂದರ್ಶನದ ವೇಳೆ ನಡೆಯುವ ಅವ್ಯವಹಾರ ತಪ್ಪಿಸಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಣಯ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್​ಸಿ) ಸಂದರ್ಶನ ವೇಳೆ ಆಗಬಹುದಾದ ಅವ್ಯವಹಾರ ನಿಯಂತ್ರಿಸಿ ನೇಮಕಾತಿಯಲ್ಲಿ ಬಿಗಿ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಬುಧವಾರ...

ಖಂಡಿಗೆ ಕಿಂಡಿ ಅಣೆಕಟ್ಟು ದುರಸ್ತಿಗಿಲ್ಲ ಕ್ರಮ

ಲೋಕೇಶ್ ಸುರತ್ಕಲ್ ಪಾವಂಜೆ ಖಂಡಿಗೆ ಬಳಿ ಇರುವ ನಂದಿನಿ ನದಿ ಕಿಂಡಿ ಅಣೆಕಟ್ಟಿನ ದುರಸ್ತಿಗೆ ಅಧಿಕಾರಿಗಳು ಖಚಿತ ಯೋಜನೆ ರೂಪಿಸಿಲ್ಲ. ಅಣೆಕಟ್ಟು ನಿರ್ವಹಣೆಗೆ ಸಮಿತಿಯೇ ರಚನೆಯಾಗಿಲ್ಲ. ಹಾಗಾಗಿ...

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ

ವರ್ಷಾ ನೀರು ಹರೀತಿತ್ರೀ.. ಆದ್ರ ಈ ವರ್ಷ ಅಡಿಗೆ ಮನೀಗೆ ನೀರು ನುಗ್ಗೈತ್ರಿ.. ಹಿಂಗಾಗಿ ಊರು ಬಿಟ್ ಬೆಚ್ಚಗಿದ್ದಲ್ಲಿ ಇದ್ದು, ಈಗ ಬಿಸಿಲು ಬೀಳಾಕ್ ಹತ್ತಿದ ಮ್ಯಾಲೆ ಊರಿಗೆ ಬಂದೀವ್ರೀ.. ಹಳ್ಳದ ನೀರು ಸರಳ ಹೋಗುವಂಗ್ ಮಾಡಿಬಿಟ್ರೆ ನಮ್ಗೆ ಯಾವ ತೊಂದ್ರೆನೂ ಇಲ್ರೀ..

ಹೀಗೆ ಕಳೆದ 20 ದಿನಗಳಿಂದ ಸಂಕಷ್ಟದ ಸ್ಥಿತಿ ಎದುರಿಸುತ್ತಿರುವ ತಾಲೂಕಿನ ಚಿಕ್ಕನೆಲ್ಲೂರು ಗ್ರಾಮದ 300ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಕಣ್ಣೀರ ಕತೆ ಹೇಳಿದರು.

ಗ್ರಾಮ ಚಿಕ್ಕದಾಗಿದ್ದರೂ ಎರಡೂ ಹಳ್ಳಗಳ ಸಂಗಮದ ಕೇಂದ್ರವಾಗಿದೆ. ಶಿಗ್ಗಾಂವಿ ಪಟ್ಟಣದ ನಾಗನೂರು ಕೆರೆಯ ಕೋಡಿ ನೀರು ಗ್ರಾಮದ ಮನೆಗಳಿಗೆ ನುಗ್ಗಿದರೆ, ಚಿಕ್ಕಬೆಂಡಿಗೇರಿಯ ಚಿಕ್ಕ ಹಳ್ಳದ ನೀರು ಇದೇ ಗ್ರಾಮಸ್ಥರಿಗೆ ಸೇರಿದ ಜಮೀನುಗಳಿಗೆ ನುಗ್ಗುತ್ತಿದೆ. ಹೀಗಾಗಿ ಸುತ್ತುವರಿದ ನೀರಿನಲ್ಲಿ ಬದುಕು ಸಾಗಿಸಲಾಗದೆ, ಆಶ್ರಯ ತಾಣಗಳನ್ನು ಹುಡುಕಿ, ಕುಟುಂಬದೊಂದಿಗೆ ಸಿಕ್ಕ ಆಹಾರ ಸೇವಿಸಿ ಸಂಕಷ್ಟ ಎದುರಿಸಿದ್ದಾರೆ.

ಗ್ರಾಮದಲ್ಲಿ 365 ಮತದಾರರಿದ್ದಾರೆ. ಅಂದಾಜು 800ರಿಂದ 1000 ಜನ ವಾಸ ವಾಗಿರುವ ಗ್ರಾಮ ಇದಾಗಿದೆ. ಇಲ್ಲಿ ಹಳ್ಳ ಬಿಟ್ಟರೆ, ಕೆರೆ-ಕಟ್ಟೆಗಳು ಒಡೆದು ಹಾನಿಯಾಗುವ ಸ್ಥಿತಿಯಿಲ್ಲ. ಆದರೆ, ಪಕ್ಕದ ಪಟ್ಟಣದ ಕೆರೆ ತುಂಬಿದರೆ ಇವರ ಜೀವನ ಅಲ್ಲೋಲ ಕಲ್ಲೋಲ ಎಂಬುದು ಇತ್ತೀಚೆಗೆ ಸುರಿದ ಮಳೆ ಅನಾಹುತದಿಂದ ಗ್ರಾಮದಲ್ಲಿ ಉಂಟಾದ ಸ್ಥಿತಿಯಿಂದ ಸ್ಪಷ್ಟಗೊಳ್ಳುತ್ತದೆ.

ಕಳೆದ ವಾರ ನಾಗನೂರು ಕೆರೆಯ ಕೋಡಿ ಬಿದ್ದು ನೀರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸುವ ಮಟ್ಟಕ್ಕೇರಿತ್ತು. ಆ ನೀರು ರಸ್ತೆ ದಾಟಿ ಚಿಕ್ಕನೆಲ್ಲೂರಿನತ್ತ ಸಾಗಿದ್ದರಿಂದ ಮನೆಯಲ್ಲಿದ್ದ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಕಾಲುವೆ ಮೂಲಕ ಹರಿದು ಬಂದ ನೀರು ನೋಡ ನೋಡುತ್ತಲೇ ಜಮೀನುಗಳಿಗೆ ನುಗ್ಗಿ, ಗ್ರಾಮದ ಮನೆಗಳತ್ತ ಬಂದಿತು. ಏರುತ್ತಿರುವ ನೀರಿನ ಪ್ರಮಾಣ ಕಂಡು ಜನರು ಮನೆ ತೊರೆದು ಹತ್ತಿರದ ದೇವಸ್ಥಾನ, ಮಠಗಳತ್ತ ಸಾಗಿದ್ದರು.

ಇದರಲ್ಲಿ ಯಾವ ಇಲಾಖೆ ದೋಷವಿದೆಯೋ ಎಂಬುದನ್ನು ನಿರ್ಧರಿಸುವುದೂ ಸ್ಪಷ್ಟವಿಲ್ಲ. ಲೋಕೋಪಯೋಗಿ, ಸಣ್ಣ ನೀರಾವರಿ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಇದರಲ್ಲಿ ನಮ್ಮ ತಪ್ಪಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ. ಕೋಡಿ ನೀರು ಹರಿಯುವ ಕಾಲುವೆ ಕಿರಿದಾಗಿದೆ. ನೀರಿನ ಹೊರಹರಿವಿನ ಸಾಂದ್ರತೆಗೆ ತಕ್ಕಂತೆ ಕಾಲುವೆ ನಿರ್ವಣವಾಗದ ಕಾರಣ ಚಿಕ್ಕನೆಲ್ಲೂರು ಗ್ರಾಮಸ್ಥರು ಮತ್ತೆ ಮಳೆಯಾದರೆ ಮುಳುಗಡೆಯ ಭೀತಿ ನಮಗೆ ತಪ್ಪಿದ್ದಲ್ಲ ಎಂಬ ಭೀತಿಯಲ್ಲಿದ್ದಾರೆ.

ರೋಗದ ಭೀತಿ: ಮಳೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಪ್ರವಾಹದಿಂದ ಅಲ್ಲಲ್ಲಿ ನಿಂತ ನೀರಿನಿಂದ ಸಾಂಕ್ರಾಮಿಕ ರೋಗದ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಸೊಳ್ಳೆಗಳಿಂದ ಡೆಂಘೆ, ಚಿಕೂನ್​ಗುನ್ಯಾ, ಮಲೇರಿಯಾದಂಥ ರೋಗಗಳು ಹರಡಬಹುದು. ಈಗಾಗಲೇ ಗ್ರಾಮದ 200ಕ್ಕೂ ಹೆಚ್ಚು ಜನ ಈ ರೋಗಗಳಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿದ್ದಾಗ್ಯೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮದತ್ತ ಸುಳಿದಿಲ್ಲ.

ಫಾಗಿಂಗ್ ಮಾಡಿಲ್ಲ ಚಿಕ್ಕನೆಲ್ಲೂರು ಸೇರಿ ಚಾಕಾಪುರ, ಹನುಮರಹಳ್ಳಿ, ಮೋಟಳ್ಳಿ ಗ್ರಾಮಗಳು ಹತ್ತಿರದಲ್ಲಿವೆ. ಇದರ ಸುತ್ತ ಅಲ್ಲಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ಗಮನಿಸಿಯಾದರೂ ಗ್ರಾಪಂನವರು ಚರಂಡಿಗಳಿಗೆ ಫಾಗಿಂಗ್ ಮಾಡಿ ರೋಗ ನಿಯಂತ್ರಣಕ್ಕೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ನಮ್ಮೂರಾಗಿನ ಜನ ಡಾಕ್ಟರಿಗೇ ಬ್ಯಾಸರಾಗಿವ್ರೀ. ಒಂದೇ ಸಲಕ್ಕೆ 200 ಜನ ದಾಖಲಾಗೇವಿ. ಇದು ತಾಲೂಕಿನೊಳಗ ಹೊಸ ದಾಖಲೆ. ವೈದ್ಯರು, ದೇವರು ಜೀವ ಬದುಕಿಸ್ಯಾರ. ಆದರೆ, ಕೈಕಾಲು ನೋವು ಕಡಿಮಿಯಾಗಿಲ್ಲ. ಊರಾಗ್ ಇರಾಕ್ ಬ್ಯಾಸರಾಗೈತಿ. ಈ ಊರನ್ನ ಎಲ್ಲರ ಸ್ಥಳಾಂತರ ಮಾಡ್ರಿ.

| ಹನುಮಂತಪ್ಪ ಕಳ್ಳಿಮನಿ, ಗಂಗಯ್ಯ ಹಿರೇಮಠ, ಫಕೀರಪ್ಪ ಹರಿಜನ ಗ್ರಾಮಸ್ಥರು

ಅತಿ ಹೆಚ್ಚು ಹಾನಿ ಅನುಭವಿಸಿ ರೋಗಕ್ಕೂ ತುತ್ತಾಗಿ ಸಂಕಷ್ಟ ಎದುರಿಸುತ್ತಿರುವ ನಮಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಯಾರೂ ಬಂದು ಸರ್ವೆನೂ ಮಾಡಿಲ್ಲ. ಜಿಪಂ ಸದಸ್ಯರು ಇದೇ ಊರಿನವರಾದ್ರೂ ಊರಲಿಲ್ಲ. ಯಾರನ್ನ ಕೇಳಬೇಕು? ಯಾರಿಗೆ ಹೇಳಬೇಕು ಎಂಬುದು ತಿಳಿಯದಂತಾಗಿದೆ.

| ಬಸಪ್ಪ ಕುರಹಟ್ಟಿ, ಮಂಜು ಕುರಹಟ್ಟಿ ಗ್ರಾಮಸ್ಥರು

- Advertisement -

Stay connected

278,638FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...