ಯುವಜನರಿಗಿಂತ ವಯಸ್ಸಾದವರೇ ಹೆಚ್ಚು ಸುಳ್ಳು ಸುದ್ದಿಗಳನ್ನು ಶೇರ್​ ಮಾಡುತ್ತಾರೆ: ಅಧ್ಯಯನ

ನವದೆಹಲಿ: ಹದಿಹರೆಯದವರಿಗೆ ಹೋಲಿಸಿದರೆ ವಯಸ್ಸಾದವರು ಹೆಚ್ಚು ಸುಳ್ಳು ಸುದ್ದಿಗಳನ್ನು ಫೇಸ್​ಬುಕ್​ನಲ್ಲಿ ಶೇರ್​ ಮಾಡುತ್ತಾರೆ ಎಂಬ ಮಾಹಿತಿ ಅಧ್ಯಯನ ಒಂದರಿಂದ ತಿಳಿದುಬಂದಿದೆ.

ನ್ಯೂಯಾರ್ಕ್​ ಹಾಗೂ ಪ್ರಿನ್ಸೆಟನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವನ್ನು ದಿ ವರ್ಜ್​ ಎಂಬ ಮಾಧ್ಯಮವು ಪ್ರಕಟಿಸಿದೆ. ​

ಶಿಕ್ಷಣ, ಆದಾಯ, ಲಿಂಗ, ಜನಾಂಗ ಹಾಗೂ ಎಷ್ಟು ಬಾರಿ ಸಾಮಾಜಿಕ ಮಾಧ್ಯಮವನ್ನು ಬಳಸುತ್ತೇವೆ ಎಂಬುದನ್ನು ಲೆಕ್ಕಿಸದೇ ಕೇವಲ ಸುಳ್ಳು ಸುದ್ದಿಗಳನ್ನು ಹೆಚ್ಚು ಶೇರ್ ಮಾಡುತ್ತಾರೆ.​ ಇತರೆ ಅಂಶಗಳಿಗಿಂತ ಅವರ ವಯಸ್ಸು ಅವರ ವರ್ತನೆಯನ್ನು ಖಚಿತಪಡಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

ಈ ಅಧ್ಯಯನಕ್ಕೆ ಫೇಸ್​ಬುಕ್​ ಬಳಕೆದಾರರು ಹಾಗೂ ಬಳಕೆದಾರರಲ್ಲದ 3,500 ಮಂದಿಯನ್ನು ಬಳಸಿಕೊಳ್ಳಲಾಗಿತ್ತು. ಅವರಿಗೆ ಫೇಸ್​ಬುಕ್​ ಆ್ಯಪ್​ ಇನ್​​ಸ್ಟಾಲ್​ ಮಾಡಿಕೊಟ್ಟು ಅದರಲ್ಲಿ ಸಾರ್ವಜನಿಕ ವಿಚಾರಗಳು, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳನ್ನು ತಮ್ಮ ಟೈಮ್​ಲೈನ್​ನಲ್ಲಿ ಹಂಚಿಕೊಳ್ಳುವಂತೆ ಹೇಳಲಾಗಿತ್ತು. ಇದರಲ್ಲಿ ಶೇ. 49 ರಷ್ಟು ಮಂದಿ ತಮ್ಮ ಪ್ರೋಪೈಲ್​ ಡೇಟಾವನ್ನು ಹೆಚ್ಚು ಶೇರ್​​ ಮಾಡುವುದಾಗಿ ತಿಳಿದುಬಂದಿದೆ.

ಎಲ್ಲ ವಯೋಮಾನದ ಫೇಸ್​ಬುಕ್​ ಬಳಕೆದಾರರಲ್ಲಿ ಶೆ. 8.5 ರಷ್ಟು ಮಂದಿ ಸುಳ್ಳು ಸುದ್ದಿಗಳ ಲಿಂಕ್​ ಅನ್ನು ಶೇರ್​ ಮಾಡುತ್ತಾರೆ. ವಯಸ್ಸಾದ ಫೇಸ್​ಬುಕ್​ ಬಳಕೆದಾರರಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಶೇ.11 ರಷ್ಟು ಸುಳ್ಳು ಸುದ್ದಿಗಳನ್ನು ಶೇರ್​ ಮಾಡುತ್ತಾರೆ. 18 ರಿಂದ 29ರ ವಯೋಮಾನದವರು ಶೇ. 3 ರಷ್ಟು ಶೇರ್​ ಮಾಡುತ್ತಾರೆ ಎಂಬುದು ತಿಳಿದುಬಂದಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *