ಜನತೆಗೆ ದೇಸಿ ಸಂಸ್ಕೃತಿ, ಪರಂಪರೆ ತಿಳಿಸಿ

ಮುನವಳ್ಳಿ: ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳು ಸೇವಾ ಕಾರ್ಯಗಳ ಜತೆಗೆ ಮೌಲ್ಯಗಳನ್ನು ಬೆಳೆಸಲು ಸೂಕ್ತ ಕಾರ್ಯಕ್ರಮ, ವಿವಿಧ ಶಿಬಿರಗಳನ್ನು ಹಮ್ಮಿಕೊಂಡು ನಮ್ಮ ಸಂಸ್ಕೃತಿ ಪರಂಪರೆಯ ಕುರಿತು ತಿಳಿಹೇಳಬೇಕು. ಮೌಲ್ಯಗಳನ್ನು ಬೆಳೆಸಬೇಕು ಎಂದು ಪ್ರೊ.ಪಿ.ವಿ.ಮೊಹರೆ ಹೇಳಿದ್ದಾರೆ.

ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ಜರುಗಿದ ಜೈಂಟ್ಸ್ ಗ್ರೂಪ್ ಹಾಗೂ ರಾಣಿ ಚನ್ನಮ್ಮ ಸಹೇಲಿ ವತಿಯಿಂದ ಜರುಗಿದ ಗುರುವಂದನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಸವಸೇನೆ ಗೌರವಾಧ್ಯಕ್ಷ ಉಮೇಶ ಬಾಳಿ ಮಾತನಾಡಿ, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಗಳಿಸಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು. ಜೈಂಟ್ಸ್ ಗ್ರೂಪ್ ಅಧ್ಯಕ್ಷ ಡಾ.ಎಂ.ಬಿ.ಅಷ್ಟಗಿಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವಿ.ಬಿ.ನಾಡಗೌಡ್ರ, ಬಿ.ಬಿ.ನಾವಲಗಟ್ಟಿ ಅವರನ್ನು ಸನ್ಮಾನಿಸಲಾಯಿತು.

ಜೈಂಟ್ಸ್ ಗ್ರೂಪ್ ರಾಜ್ಯಾಧ್ಯಕ್ಷ ಮೋಹನ ಸರ್ವಿ, ಸಹೇಲಿ ಅಧ್ಯಕ್ಷೆ ಗೌರಿ ಜಾವೂರ, ಪುಷ್ಪಾ ಸರ್ವಿ, ಸಂಜೀವಕುಮಾರ ತುಳಜಣ್ಣವರ, ಜಯಶ್ರೀ ಕುಲಕರ್ಣಿ ಶಿವಾಜಿ ಮಾನೆ, ಅಶೋಕ ರೇಣಕೆ, ವಿರಾಜ ಕೊಳಕಿ, ರಮೇಶ ಗಂಗಣ್ಣವರ, ಅರುಣಗೌಡ ಪಾಟೀಲ, ವೈ.ಪಿ.ರಾಮಜಾರ, ಬಿ.ಎಂ.ಅಂಗಡಿ, ಶಿವಕುಮಾರ ಕರೀಕಟ್ಟಿ, ಸವಿತಾ ಬಾಳಿ, ಅನುರಾಧಾ ಬೆಟಗೇರಿ, ಮಧು ಕಲಾಲ, ನಿರ್ಮಲಾ ಗದ್ವಾಲ, ಸುಮಾ ಯಲಿಗಾರ, ಅನ್ನಪೂರ್ಣ ಲಂಬೂನವರ, ಜ್ಯೋತಿ ಯಲಿಗಾರ, ಬಿ.ಬಿ.ಹುಲಿಗೊಪ್ಪ, ವೀರಣ್ಣ ಕೊಳಕಿ ಸೇರಿ ಜೈಂಟ್ಸ್ ಗ್ರೂಪ್ ಸದಸ್ಯರು ಇದ್ದರು.

Leave a Reply

Your email address will not be published. Required fields are marked *