ಸಿನಿಮಾ

ಜನರ ಗೂಳೆ ತಪ್ಪಿಸಿದ ನರೇಗಾ ಯೋಜನೆ

ಮಾನ್ವಿ: ನರೇಗಾ ಯೋಜನೆ ಜನರನ್ನು ಗೂಳೆ ಹೋಗುವುದು ತಪ್ಪಿಸಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿದೆ ಎಂದು ಜಿಪಂ ಯೋಜನಾ ಉಪನಿರ್ದೇಶಕ ಪ್ರಕಾಶ ವಡ್ಡರ್ ತಿಳಿಸಿದರು.

ಇದನ್ನೂ ಓದಿ: ನಿರಂತರ ಉದ್ಯೋಗ ನೀಡುವ ನರೇಗಾ ಕೃಷಿಕರಿಗೆ ವರದಾನ

ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಬುಧವಾರ ಗ್ರಾಪಂ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯ ನಾಲಾ ಹೂಳೆತ್ತುವ ಹಾಗೂ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು. ನರೇಗಾ ಮಹಿಳೆಯರು ಹಾಗೂ ಪುರುಷರಿಗೆ ಸಮಾನವಾದ ವೇತನದೊಂದಿಗೆ ಕೆಲಸವನ್ನು ನೀಡಿದೆ. ಅಲ್ಲದೆ ರೈತರು ವೈಯುಕ್ತಿಕ ಕಾಮಗಾರಿಗಳನ್ನು ಕೈ ಗೊಳ್ಳುವ ಅವಕಾಶವನ್ನು ಕೂಡಾ ಕಲ್ಪಿಸಿದೆ ಎಂದರು.

ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗೆ ಮತವನ್ನು ಚಲಾಯಿಸಬೇಕು. ಜನಪರ ಅಭ್ಯರ್ಥಿಯಿಂದ ಅಭಿವೃದ್ಧಿ ಕಾರ್ಯಗಳು ಆಗಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.


Latest Posts

ಲೈಫ್‌ಸ್ಟೈಲ್