ವಿದ್ಯುತ್ ಇಲ್ಲದೆ ಜನರ ಪರದಾಟ

ಶೃಂಗೇರಿ: ತಾಲೂಕಿನಲ್ಲಿ ವ್ಯಾಪಕ ಗಾಳಿ, ಮಳೆಯಿಂದ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.
ವಿದ್ಯುತ್ ಪೂರೈಕೆ ಇಲ್ಲದಿರುವುದರಿಂದ ಹಲವೆಡೆ ಕುಡಿಯುವ ನೀರಿಗೂ ಅಡಚಣೆ ಉಂಟಾಗಿದೆ. ಬಹುತೇಕ ಮನೆಯಲ್ಲಿ ಯುಪಿಎಸ್‌ಕೂಡ ನಿಷ್ಕ್ರೀಯವಾಗಿದ್ದು, ಮೊಬೈಲ್‌ಗಳಲ್ಲಿ ಚಾರ್ಚ್ ಇಲ್ಲದೇ ಜನರು ಪರದಾಡಿದರು. ಪಟ್ಟಣದ ಅನೇಕ ಹೋಟೆಲ್, ಮೆಸ್‌ಗಳು, ಸಣ್ಣ ಕೈಗಾರಿಕೆಗಳು ಮುಚ್ಚಿದ್ದವು. ಬೇಗಾರು ಗ್ರಾಪಂ ವ್ಯಾಪ್ತಿಯ ಮೀಗಾ ಗ್ರಾಮದ ಚಿಕಳಿಮನೆ ಕೃಷಿಕ ಸಿ.ಎಸ್.ಕೃಷಮೂರ್ತಿ ಅವರ ತೋಟದಲ್ಲಿ ಮರ ಉರುಳಿ ಬಿದ್ದು ಹಲವಾರು ಅಡಕೆ ಮರಗಳು ಧರೆಗೆ ಉರುಳಿವೆ. ತಾಲೂಕಿನ ಕಲ್ಕಟ್ಟೆ ಅನ್ನಪೂರ್ಣ ಅವರ ಮನೆ ಸಂಪೂರ್ಣ ಕುಸಿತಗೊಂಡಿದೆ.
ಶನಿವಾರ ಬೆಳಗ್ಗೆ ಮಳೆಯಾಗದಿದ್ದರೂ ಮೋಡ ಕವಿದ ವಾತಾವರಣ ಮುಂದುವರಿದಿದೆ. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬ್ಯಾಂಕ್, ಕಚೇರಿಗಳಿಗೆ ರಜೆ ಇದ್ದ ಕಾರಣ ಮುಖ್ಯಬೀದಿ ಹೆಚ್ಚು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು. ಸ್ಥಗಿತಗೊಂಡ ವಿದ್ಯುತ್ ಪೂರೈಕೆ ಮಧ್ಯಾಹ್ನ ಪ್ರಾರಂಭಗೊಂಡಿದ್ದು ಯುಪಿಎಸ್, ಮೊಬೈಲು ಚಾರ್ಜ್ ಮಾಡುವುದರಲ್ಲಿ ಜನರು ನಿರತರಾಗಿದ್ದರು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…