More

    ಬೆಳಗಾವಿ: ಪಿಂಚಣಿ ಸೌಲಭ್ಯ ಪರಿಷ್ಕರಣೆ ಮಾಡಿ

    ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದ ವಯೋವೃದ್ಧರು, ವಿಧವೆಯರ ಹಾಗೂ ವಿಕಲಚೇತನರ ಜನಸೇವಾ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿಗೆ ಮನವಿ ಸಲ್ಲಿಸಿದರು.

    ಸಾಮಾಜಿಕ ಭದ್ರತಾ ಯೋಜನೆಯಡಿ ಉಭಯ ಸರ್ಕಾರಗಳಿಂದ ನೀಡುವ ವೃದ್ಧಾಪ್ಯವೇತನ, ಸಂಧ್ಯಾಸುರಕ್ಷಾ, ವಿಧವಾ, ಅಂಗವಿಕಲ ಸೇರಿ ಇತರೆ ಪಿಂಚಣಿ ಯೋಜನೆಗಳನ್ನು ಅನೇಕ ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಉಭಯ ಸರ್ಕಾರಗಳಿಗೆ ವೇತನ ಪರಿಷ್ಕರಣೆ ಮಾಡಲು ನ್ಯಾಯಾಲಯ ಆದೇಶಿಸಿದೆ. ಆದರೂ ಸರ್ಕಾರಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ವೃದ್ಧರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

    ಕ್ರಮ ಕೈಗೊಳ್ಳಿ: ಮಾಹಿತಿ ಕೊರತೆ, ಅಲೆದಾಟ, ಹಣಕಾಸಿನ ಮುಗ್ಗಟ್ಟಿನಿಂದಲೂ ಅರ್ಹರು ವಿವಿಧ ಪಿಂಚಣಿ ಯೋಜನೆಯಡಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಅರ್ಹರಿಗೆ ಪಿಂಚಣಿ ಸೌಲಭ್ಯ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಏಕಗವಾಕ್ಷಿ ಯೋಜನೆ ರೂಪಿಸಬೇಕು. ಕಂದಾಯ ಅಧಿಕಾರಿ ಹಾಗೂ
    ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ದಾಖಲೆ ಪಡೆದು 15 ದಿನಗಳ ಒಳಗೆ ಪಿಂಚಣಿ ಮಂಜೂರಾತಿ ಆದೇಶ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

    ಗುರುಸಿದ್ದಪ್ಪ ತೊಗ್ಗಿ, ಬಸವರಾಜ ತೊಗ್ಗಿ, ಶ್ರೀಶೈಲ, ಸಿದ್ದಯ್ಯ ಹಿರೇಮಠ, ಶೋಭಾ ಅಕ್ಕಿ, ಕಸ್ತೂರಿ ಬಾವಿ, ರಾಜೇಂದ್ರ ನೇಸರಗಿ, ಶಂಕರ ರಾಠೋಡ ಹಾಗೂ ಸಂಸ್ಥೆಯ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts