ಪೆನ್ಸಿಲ್‌ಲೆಡ್‌ನಲ್ಲಿ ಚೈನ್‌ಲಿಂಕ್ ಗಿನ್ನೆಸ್ ದಾಖಲೆ

ಕಾರ್ಕಳ: ಪೆನ್ಸಿಲ್‌ಲೆಡ್‌ನಲ್ಲಿ ಚೈನ್ ಲಿಂಕ್‌ಗಳನ್ನು ಮಾಡುವ ಮೂಲಕ ಕಾರ್ಕಳದ ಯುವಕ ಸುರೇಂದ್ರ ಆಚಾರ್ಯ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಈದು ಗ್ರಾಮದ ನೂರಾಳ್‌ಬೆಟ್ಟು ನಿವಾಸಿ ಶ್ಯಾಮರಾಯ – ಲಲಿತಾ ಆಚಾರ್ಯ ದಂಪತಿ ಪುತ್ರ ಸುರೇಂದ್ರ ಏ.7ರಂದು ಕಾರ್ಕಳದ ಅನಂತಶಯನ ರೋಟರಿ ಬಾಲಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ದಾಖಲೆ ನಿರ್ಮಿಸಿದ್ದು, ಈಗ ಫಲಿತಾಂಶ ಪ್ರಕಟಗೊಂಡಿದೆ.

ಪಾಕ್ ಹೆಸರಲ್ಲಿದ್ದ ದಾಖಲೆ: ಏಳು ಗಂಟೆಗಳ ಅವಧಿಯಲ್ಲಿ ಪೆನ್ಸಿಲ್ ಲೆಡ್‌ನಲ್ಲಿ ಚೈನ್ ಲಿಂಕ್(50 ಕೊಂಡಿಗಳ) ರಚಿಸಿರುವ ಪಾಕಿಸ್ತಾನದ ಕಲಾವಿದರೊಬ್ಬರ ಹೆಸರಲ್ಲಿ ಈ ದಾಖಲೆ ಇತ್ತು. ಏಳು ತಾಸಿನಲ್ಲಿ ಸುರೇಂದ್ರ 58 ಕೊಂಡಿಗಳನ್ನು ರಚಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

 ಪೆನ್ಸಿಲ್‌ಲೆಡ್‌ನಿಂದ ಚೈನ್ ಲಿಂಕ್‌ಗಳ ಗಿನ್ನೆಸ್ ದಾಖಲೆ ನಿರ್ಮಿಸಿರುವ ಬಗ್ಗೆ ಹೆಮ್ಮೆ ಇದೆ. ಗಿನ್ನೆಸ್ ದಾಖಲೆಯತ್ತ ಸಾಗುವ ಮೊದಲು ನನ್ನ ಕಲೆಯ ಪ್ರತಿಭೆಯನ್ನು ಮೊದಲ ಬಾರಿ ಗುರುತಿಸಿದ ವಿಜಯವಾಣಿಗೆ ಚಿರಋಣಿಯಾಗಿದ್ದೇನೆ.
-ಸುರೇಂದ್ರ ಆಚಾರ್ಯ, ಪೆನ್ಸಿಲ್ ಲೆಡ್ ಕಲಾವಿದ

Leave a Reply

Your email address will not be published. Required fields are marked *