More

    ಸಾಮಾಜಿಕ, ಧಾರ್ಮಿಕ ಬದುಕಿಗೆ ಮಾರ್ಗದರ್ಶಕರಾಗಿದ್ದರು ಪೇಜಾವರ ಶ್ರೀಗಳು: ಮುಖ್ಯಮಂತ್ರಿ ಯಡಿಯೂರಪ್ಪ

    ಬೆಂಗಳೂರು: ಇತ್ತೀಚೆಗೆ ಕೈಷ್ಣೈಕ್ಯರಾದ ಪೇಜಾವರ ಮಠಾಧೀಶರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಇಂದು ಅವರ ಶಿಷ್ಯವೃಂದ ಹಾಗೂ ಮಾಧ್ವ ಸಮಾಜದಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ, ರಾಜ್ಯಪಾಲ ವಜೂಭಾಯಿ ವಾಲ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್ ವೆಂಕಟಾಚಲಯ್ಯ, ಸಂಸದೆ ಶೋಭ ಕರಂದ್ಲಾಜೆ, ಶಾಸಕರುಗಳಾದ ಅರವಿಂದ್ ಲಿಂಬಾವಳಿ, ಉದಯ್ ಗರುಡಾಚಾರ್, ಶರವಣ, ಯೋಗಗುರು ಬಾಬಾ ರಾಮದೇವ್​, ಪೇಜಾವರ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥರು, ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಮಾಜಿ ಸಚಿವ ಸೋಮಣ್ಣ ಇತರರು ಭಾಗಿಯಾಗಿದ್ದರು.

    ಸಿಎಂ ಬಿ.ಎಸ್​.ಯಡಿಯೂರಪ್ಪ ಮಾತನಾಡಿ, ಶ್ರೀಗಳು ಕನ್ನಡ ನಾಡಿನ ಸಾಮಾಜಿಕ, ಧಾರ್ಮಿಕ ಬದುಕಿಗೆ ಮಾರ್ಗದರ್ಶನ ಮಾಡಿದವರು. ದಲಿತ ಕೇರಿಗಳಿಗೆ ಕಾಲಿಟ್ಟು ಸಾಮರಸ್ಯ ಸಾರಿದ್ದರು ಎಂದು ಹೇಳಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಅವರ ಕನಸಾಗಿತ್ತು. ವೈಚಾರಿಕ ವಿರೋಧಿಗಳ ಮಧ್ಯೆಯೂ ಸಾಮರಸ್ಯದಿಂದ ಇರುತ್ತಿದ್ದರು ಎಂದರು.

    ವಿನಯ್​ ಗುರೂಜಿ ಮಾತನಾಡಿ, ಮೂರು ವರ್ಷಗಳ ಹಿಂದೆ ಗುರುಗಳು ಸಿಕ್ಕಿದ್ದರು. ಪೇಜಾವರ ಶ್ರೀಗಳ ದೇಹದ ಒಳಗೆ ಶ್ರೀಕೃಷ್ಣ ವಾಸವಾಗಿದ್ದ. ಅವರದ್ದು ಆಡಂಬರವಿಲ್ಲದ ಆಧ್ಯಾತ್ಮಿಕ ಜೀವನ ಎಂದು ಹೇಳಿದರು.

    ಶ್ರೀ ವಿಶ್ವೇಶ ತೀರ್ಥರು ಕೇವಲ ದೇಹವನ್ನು ತ್ಯಾಗ ಮಾಡಿದ್ದಾರೆ. ಅವರು ತುಳಸಿ ವೃಂದಾವನದಲ್ಲೇ ಇದ್ದಾರೆ. ಕೃಷ್ಣ ದ್ವಾರಕೆಯನ್ನ ಪ್ರಸಿದ್ಧಿ ಮಾಡಿದ, ಪೇಜಾವರರು ಉಡುಪಿಗೆ ವಿಶ್ವ ಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟರು ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts