ರಾಯಚೂರು: ಆಪರೇಷನ್ ಕಮಲದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ತನಿಖೆಯಾಗಲಿ. ನ್ಯಾಯಯುತ ತನಿಖೆ ಮಾಡಿದಾಗ ಸತ್ಯಾಂಶ ಬಯಲಾಗಲಿದ್ದು, ಈ ಕುರಿತು ಈಗಲೇ ಏನು ಹೇಳಲು ಬರುವುದಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳು ತುಂಬಾ ಬೇಸರ ತರಿಸಿವೆ. ಶಾಸಕರ ರೆಸಾರ್ಟ್ ವಾಸ್ತವ್ಯ, ಆಪರೇಷನ್ ಕಮಲ, ಆಡಿಯೋದಂತಹ ವಿಚಾರಗಳಿಗೆ ರಾಜಕೀಯ ನಾಯಕರು ಹೆಚ್ಚಿನ ಗಮನ ಕೊಡುತ್ತಿರುವುದು ಆತಂಕಕಾರಿ ವಿಷಯ. ಮೂರೂ ರಾಜಕೀಯ ಪಕ್ಷಗಳು ಜನರ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಬರಗಾಲದ ದಿನಗಳಲ್ಲಿ ಸರ್ಕಾರ ಜನರ ಸಮಸ್ಯೆ ಅರಿತು ಕಾರ್ಯನಿರ್ವಹಿಸಬೇಕು ನಗರದ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
