ಗಾಯತ್ರಿ ಮಂತ್ರ ಪಠಣ ಕೇವಲ ಬ್ರಾಹ್ಮಣರಿಗೆ ಸೀಮಿತವಲ್ಲ, ಎಲ್ಲರಿಗೂ

ರಾಯಚೂರು: ಲೋಕದ ಉದ್ಧಾರಕ್ಕಾಗಿ ಬ್ರಾಹ್ಮಣರಾದವರು ಗಾಯತ್ರಿ ಪಠಣ ಮಾಡಲೇಬೇಕು. ಹಾಗಂತ ಗಾಯತ್ರಿ ಮಂತ್ರ ಪಠಣ ಕೇವಲ ಬ್ರಾಹ್ಮಣರಿಗೆ ಸೀಮಿತವಲ್ಲ. ಅದು ಎಲ್ಲ ಸಮುದಾಯದವರೂ ಲೋಕಕಲ್ಯಾಣಕ್ಕಾಗಿ ಮಾಡಬೇಕು. ಜಗತ್ತಿನ ಜನರ ಲೋಕ ಕಲ್ಯಾಣಕ್ಕಾಗಿ ಮಾಡುವ ಗಾಯತ್ರಿ ಮಂತ್ರ ಪಠಣ ವಿಶ್ವಗೀತೆಯಾಗಿದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವೇಶ್ವ ತೀರ್ಥರು ಹೇಳಿದ್ದಾರೆ.

ನಗರದ ಗುರುರಾಜ ಭಜನಾ ಮಂಡಳಿ, ಶ್ರೀ ಮುಂಗ್ಲಿ ಮುಖ್ಯ ಪ್ರಾಣದೇವರ ಸೇವಾ ಸಮಿತಿ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಧ್ವನವಮಿಯ ವಿಶೇಷ ಪೂಜೆ ಹಾಗೂ ಪಂಚಮ ಪರ್ಯಾಯ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಗುರುವಂದನಾ ಕನಕ ಪುಷ್ಪಾರ್ಚನೆ, ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದರು.
ಕಡ್ಡಾಯವಾಗಿ ತೆರಿಗೆ ಎಂದು ಭಾವಿಸಬೇಕು ಎಂದು ಸಲಹೆ ನೀಡಿದರು.