17.8 C
Bengaluru
Wednesday, January 22, 2020

ರಾಮಮಂದಿರ ನಿರ್ಮಾಣಕ್ಕಿದು ಪ್ರಶಸ್ತ ಕಾಲ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಬೆಂಗಳೂರು: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಅನುಕೂಲಕರ ವಾತಾವರಣ ಇರುವ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದೇವೆ. ಸುಗ್ರೀವಾಜ್ಞೆ ಅಥವಾ ಸಂಯುಕ್ತ ಸಭೆಯ ಮೂಲಕ ಮಂದಿರದ ಕನಸನ್ನು ಸಾಕಾರ ಮಾಡಬೇಕು…’ ಇದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ಕೇಂದ್ರ ಸರ್ಕಾರದ ಮುಂದಿಟ್ಟಿರುವ ಹಕ್ಕೊತ್ತಾಯ. ರಾಮಮಂದಿರ ನಿರ್ಮಾಣ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ 24X7 ನ್ಯೂಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ರಾಮ ಮಂದಿರ ನಿರ್ವಣಕ್ಕಿರುವ ಅಡೆತಡೆ, ಅವಕಾಶಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಂದಿರ ವಿಚಾರದಲ್ಲಿ ಎನ್​ಡಿಎ ಸರ್ಕಾರಕ್ಕೆ ಕಾಲಾವಕಾಶ ನೀಡಿ ನೋಡಿದೆವು. ಆದರೆ, ವಿಳಂಬ ನೀತಿಯಿಂದಾಗಿ ಹೋರಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಶೀಘ್ರ ಈ ಸಮಸ್ಯೆ ಬಗೆಹರಿಸಬೇಕೆಂದು ಸುಪ್ರೀಂಕೋರ್ಟ್​ನ ನಿಕಟಪೂರ್ವ ಸಿಜೆಐ ದೀಪಕ್ ಮಿಶ್ರಾ ಸಹ ತಿಳಿಸಿದ್ದರು. ಹೀಗಾಗಿ ಕೇಂದ್ರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕರಿಸಬೇಕೆಂದು ಶ್ರೀಗಳು ಸಲಹೆ ನೀಡಿದರು.

ಕುಂಭಮೇಳದಲ್ಲಿ ಹೋರಾಟ

ವಾಜಪೇಯಿ ಅವರ ಎನ್​ಡಿಎ ಸರ್ಕಾರಕ್ಕೆ ಪೂರ್ಣ ಬಹುಮತ ಇರಲಿಲ್ಲವಾದ್ದರಿಂದ ಅವರು ರಾಮ ಮಂದಿರ ನಿರ್ವಣಕ್ಕೆ ಒಲವು ತೋರಿರಲಿಲ್ಲ. ಆದರೆ, ಈಗಿನ ಸರ್ಕಾರ ಸುಭದ್ರವಾಗಿದೆ. ವಿರೋಧ ಪಕ್ಷ ಶಕ್ತಿ ಕಳೆದುಕೊಂಡಿದ್ದು, ಹಲ್ಲು ಕಿತ್ತ ಹಾವಿನಂತಾಗಿದೆ. ಮತ್ತೊಂದೆಡೆ ಚುನಾವಣೆ ಸಮೀಪಿಸಿದಾಗ ಕಾಂಗ್ರೆಸಿಗರು ಮಂದಿರದ ವಿಚಾರವಾಗಿ ತೋರಿಕೆಯ ಭಕ್ತಿ ಪ್ರದರ್ಶಿಸುತ್ತಿದ್ದು, ಮುಸ್ಲಿಂ ಮತಬ್ಯಾಂಕ್​ಗೆ ಕಟ್ಟುಬಿದ್ದಿದ್ದಾರೆ. ಕೇಂದ್ರವೇ ಈ ವಿವಾದಕ್ಕೆ ತೆರೆ ಎಳೆದು ರಾಮಮಂದಿರ ನಿರ್ವಣಕ್ಕೆ ಮುಂದಾಗದಿದ್ದಲ್ಲಿ ಪ್ರಯಾಗದಲ್ಲಿ ನಡೆಯಲಿರುವ ಕುಂಭ ಮೇಳದಲ್ಲಿ ಮುಂದಿನ ಹೋರಾಟದ ಹಾದಿ ರೂಪಿಸಲಾಗುತ್ತದೆ. ವಿಶ್ವ ಹಿಂದು ಪರಿಷತ್ ಸಹ ತನ್ನ ನಿಲುವು ತಿಳಿಸಲಿದೆ ಎಂದು ಪೇಜಾವರ ಶ್ರೀ ತಿಳಿಸಿದರು.


ರಾಮ ಮಂದಿರ ನಿರ್ವಿುಸದಿದ್ದರೆ ತೀವ್ರ ಹೋರಾಟ

# ಸುಪ್ರೀಂಕೋರ್ಟ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಮುಂದೂಡಿದ್ದರಿಂದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಇದು ಎಷ್ಟು ಸರಿ?

ರಾಮ ಮಂದಿರ ನಿರ್ಮಾಣ ವಿಚಾರವಾಗಿ ಕಾದು ಕಾದು ಸಾಕಾಗಿದೆ. ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬಹುಮತ ಇಲ್ಲದ ಪರಿಣಾಮ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಬೇಕು. ಇಲ್ಲವೇ ಸಂಯುಕ್ತ ಸಭೆ ಕರೆದು ವಿರೋಧ ಪಕ್ಷದ ಮನವೊಲಿಸಿ ಲೋಕಸಭೆ-ರಾಜ್ಯಸಭೆಯಲ್ಲಿ ವಿಧೇಯಕ ಪಾಸು ಮಾಡಬೇಕು. ಈ ಹಿಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದಷ್ಟು ಶೀಘ್ರ ರಾಮ ಮಂದಿರ ನಿರ್ಮಾಣ ವಿವಾದ ಬಗೆಹರಿಸಬೇಕೆಂದು ಹೇಳಿದ್ದರು. ಈಗಿನ ಮುಖ್ಯ ನ್ಯಾಯಮೂರ್ತಿಗಳು ಇದನ್ನು ಜನವರಿಗೆ ಮುಂದೂಡಿದ್ದಾರೆ.

# ಕೋರ್ಟ್ ತೀರ್ಪಿಗೂ ಮುನ್ನವೇ ಸುಗ್ರೀವಾಜ್ಞೆ ಹೊರಡಿಸಿ ಎನ್ನುವುದು ಸರಿಯಾ?

ನ್ಯಾಯಕ್ಕಾಗಿ ಇಷ್ಟು ವರ್ಷ ಕಾದೆವು. ಒಬ್ಬ ಅಪರಾಧಿಗೆ 30 ವರ್ಷಗಳ ಬಳಿಕ ಶಿಕ್ಷೆ ನೀಡುವುದು ಯಾವ ನ್ಯಾಯ? ನ್ಯಾಯ ದೊರಕದಿರುವುದು ಹಾಗೂ ವಿಳಂಬವಾಗಿ ನ್ಯಾಯ ಒದಗಿಸುವುದು ಎರಡೂ ಒಂದೇ. ಹೀಗಾಗಿಯೇ ಒತ್ತಾಯಿಸುತ್ತಿರುವುದು.

# ಈಚೆಗೆ ದೆಹಲಿಯಲ್ಲಿ ನಡೆದ ಅಖಿಲ ಭಾರತ ಸಂತರ ಸಮ್ಮೇಳನದಲ್ಲಿ ಮಂದಿರ ನಿರ್ವಣಕ್ಕೆ ಯಾವೆಲ್ಲ ನಿರ್ಣಯ ಕೈಗೊಳ್ಳಲಾಯಿತು?

ಈ ಸಮ್ಮೇಳನ ವಿಶ್ವ ಹಿಂದು ಪರಿಷತ್ತಿನಿಂದ ನಡೆದಿಲ್ಲ. ಹೀಗಾಗಿ ನನಗೆ ಮಾಹಿತಿ ಇರಲಿಲ್ಲ. ಸಮ್ಮೇಳನದಲ್ಲಿ ಕೈಗೊಂಡ ತೀರ್ವನಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ.

# ಅಡ್ವಾಣಿ ಸೇರಿ ಹಿರಿಯ ಬಿಜೆಪಿ ಮುಖಂಡರು ರಾಮ ಮಂದಿರ ನಿರ್ವಣಕ್ಕೆ ಸ್ವತಃ ಹೋರಾಡಿದರು. ಈಗಿನ ತಲೆಮಾರಿನ ಬಿಜೆಪಿ ನಾಯಕರಿಗೆ ಇಚ್ಛಾಶಕ್ತಿ ಇಲ್ಲ ಅನಿಸುತ್ತಿದೆಯೆ?

ವಾಜಪೇಯಿ ಸಹ ಆಸಕ್ತಿ ತೋರಿರಲಿಲ್ಲ. ಕಾರಣ, ಅಂದು ಸರ್ಕಾರ ಸುಭದ್ರವಾಗಿರಲಿಲ್ಲ. ವಿವಿಧ ಪಕ್ಷಗಳನ್ನು ಒಟ್ಟುಗೂಡಿಸಿಕೊಂಡು ಸರ್ಕಾರ ನಡೆಸುವುದು ಸವಾಲಾಗಿತ್ತು. ಈ ಕಾರಣದಿಂದಲೇ ರಾಮ ಮಂದಿರ ನಿರ್ಮಾಣ ವಿಷಯ ಎತ್ತಿಕೊಳ್ಳಲಿಲ್ಲ. ಹಾಗೆಂದು ಈಗಿನ ನಾಯಕರಿಗೆ ಇಚ್ಛಾಶಕ್ತಿ ಇಲ್ಲ ಎಂದು ಹೇಳಲು ಬರುವುದಿಲ್ಲ.

# ಮಂದಿರ ನಿರ್ಮಾಣ ಬಗ್ಗೆ ಬಿಜೆಪಿ ನಾಯಕರಿಗೆ ಏನು ಸಂದೇಶ ನೀಡುತ್ತೀರಿ?

ನಾನು ಬಿಜೆಪಿಗೆ ಮಾರ್ಗದರ್ಶಕನಲ್ಲ. ವಿಶ್ವ ಹಿಂದು ಪರಿಷತ್ತಿಗೆ ಮಾತ್ರ ಸಲಹೆ ನೀಡುತ್ತೇನೆ. ಚುನಾವಣೆ ಹತ್ತಿರ ಬರುತ್ತಿದೆ. ನಿಮ್ಮ ಅವಧಿ ಮುಗಿಯುತ್ತಿದೆ ಎಂದು ಎಚ್ಚರಿಸುವುದು ನಮ್ಮ ಕೆಲಸ.

# ಪರಿಶಿಷ್ಟರ ಮೀಸಲಾತಿ, ಜಲ್ಲಿಕಟ್ಟಿನ ವಿಚಾರ ಬಂದಾಗ ಸುಗ್ರೀವಾಜ್ಞೆ ಹೊರಡಿಸುತ್ತಾರೆ. ರಾಮ ಮಂದಿರ ವಿಚಾರವಾಗಿ ಏಕೆ ಸರ್ಕಾರ ಹಿಂದೇಟು ಹಾಕುತ್ತಿದೆ?

ಅದು ನಮ್ಮ ವಿಪರ್ಯಾಸ. ಎಸ್​ಸಿ-ಎಸ್​ಟಿ ಮೀಸಲಾತಿ, ಜಲ್ಲಿಕಟ್ಟು ಸೇರಿ ವಿವಿಧ ವಿಷಯ ಗಳಿಗೆ ವಿರೋಧ ಮಾಡುವವರಿಲ್ಲ. ಹೀಗಾಗಿ ರಾಜ್ಯಸಭೆಯಲ್ಲೂ ವಿಧೇಯಕ ಅಂಗೀಕಾರ ವಾಗುತ್ತದೆ. ಆದರೆ, ರಾಮ ಮಂದಿರಕ್ಕೆ ವಿರೋಧ ಮಾಡುವವರಿದ್ದಾರೆ.

# ಕಾಂಗ್ರೆಸ್ ನಾಯಕರು ಸಹ ದೇವಾಲಯಗಳನ್ನು ಸುತ್ತಲು ಆರಂಭಿಸಿದ್ದಾರೆ. ಆದ್ದರಿಂದ ರಾಮ ಮಂದಿರ ನಿರ್ವಣಕ್ಕೆ ವಿರೋಧಿಸುತ್ತಾರೆ ಅನಿಸುತ್ತದೆಯೆ?

ಖಂಡಿತ ವಿರೋಧ ಮಾಡುತ್ತಾರೆ. ಅವರು ಮುಸ್ಲಿಮರ ವಿರೋಧ ಕಟ್ಟಿಕೊಳ್ಳಲು ತಯಾರಿಲ್ಲ. ಮುಸ್ಲಿಂ ಮತ ಬ್ಯಾಂಕ್​ಗೆ ಕಟ್ಟುಬಿದ್ದಿದ್ದಾರೆ.

# ಕಾಂಗ್ರೆಸಿಗರು ದೇಹದಲ್ಲಿಯೇ ರಾಮನಿದ್ದಾನೆ. ಹೀಗಾಗಿ ಮಂದಿರ ಬೇಡ ಎನ್ನುತ್ತಿದ್ದಾರೆ…

ಇದೆಲ್ಲ ಪ್ರಚಾರಕ್ಕಾಗಿ ಆಡುವ ಮಾತೇ ಹೊರತು ಒಂದು ಸಮಾಜದ ಮಾತಲ್ಲ. ಬುದ್ಧಿಜೀವಿಗಳು ಯಾವಾಗಲೂ ಹಿಂದು ವಿರೋಧಿಗಳು. ಯಾವುದೇ ಕಾರಣಕ್ಕೂ ಹಿಂದು ಧರ್ಮ, ಮಠ ಹಾಗೂ ಜನರಿಗೆ ಅನ್ಯಾಯವಾಗಬಾರದು. ಮುಸ್ಲಿಮರ ಮೇಲೆ ನಮಗೆ ಯಾವುದೇ ದ್ವೇಷವಿಲ್ಲ.

# ರಾಮ ಮಂದಿರ ವಿವಾದಕ್ಕೇನು ಪರಿಹಾರ?

ಮುಸ್ಲಿಮರ ಜತೆಗೆ ಮಾತುಕತೆ ನಡೆಸಿ, ಒಪ್ಪಿಸಬೇಕು. ಸಂಧಾನಕ್ಕೆ ಕುಳಿತಾಗ ಮಾತ್ರ ಸಮಸ್ಯೆಗೆ ಪರಿಹಾರಗಳು ಕಾಣಿಸುತ್ತವೆ.

# ಮೋದಿ ಸರ್ಕಾರದ ಸಾಧನೆ ಬಗ್ಗೆ ತೃಪ್ತಿ ಇದೆಯೆ?

ಆರ್ಥಿಕವಾಗಿ ಭಾರತದ ಪರಿಸ್ಥಿತಿ ಸುಧಾರಿಸಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಸರ್ಕಾರದ ಬಗ್ಗೆ ನಾನು ಯಾವುದೇ ಮಾತನಾಡಲಾರೆ. ನೂರಕ್ಕೆ ನೂರು ಅಂಕವನ್ನೂ ನೀಡುವುದಿಲ್ಲ. ಹಾಗೆಂದು ನೂರಕ್ಕೆ 10 ಅಂಕವಷ್ಟನ್ನೇ ನೀಡುವುದೂ ಇಲ್ಲ.

# ಅಯೋಧ್ಯೆ ಬಳಿಕ ಕಾಶಿ, ಮಥುರಾವನ್ನು ಕೇಳುತ್ತೀರಿ ಎಂದು ಹೇಳಲಾಗುತ್ತಿದೆಯಲ್ಲ?

ಈ ಬಗ್ಗೆ ವಿಶ್ವ ಹಿಂದು ಪರಿಷತ್ತು ತನ್ನ ನಿಲುವು ಪ್ರಕಟಿಸುತ್ತದೆ. ರಾಮ, ಕೃಷ್ಣ ಹಾಗೂ ಶಿವ ನಮ್ಮ ಆರಾಧ್ಯ ದೈವ. ಹೀಗಾಗಿ ಈ ಮೂರೂ ಆಗಬೇಕು.

# ವಿವಾದಿತ ಜಾಗದಲ್ಲಿ ಒಂದೆಡೆ ಮಸೀದಿ ಇನ್ನೊಂದೆಡೆ ಮಂದಿರ ನಿರ್ವಣವಾಗಲಿ ಎಂಬ ವಾದಕ್ಕೆ ಒಪು್ಪತ್ತೀರಾ?

ಮೊದಲು ಸಂಧಾನವಾಗಲಿ, ಆಮೇಲೆ ನೋಡೋಣ.

# ಶಾಸ್ತ್ರದ ಪ್ರಕಾರ ಮಂದಿರ, ಮಸೀದಿ ಅಕ್ಕಪಕ್ಕ ನಿರ್ವಿುಸಲು ಅವಕಾಶವಿದೆಯೆ?

ಸಮೀಪದಲ್ಲಿ ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ, ಅನವಶ್ಯಕ ಘರ್ಷಣೆಯಾಗುವ ಸಾಧ್ಯತೆ ಇರುತ್ತದೆ.

# ಶಬರಿಮಲೆಗೆ ಮಹಿಳಾ ಪ್ರವೇಶಾತಿಗೆ ಸಹಮತ ಸೂಚಿಸುವಿರಾ?

ದೇಶದ ವಿವಿಧ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ಕಲ್ಪಿಸಲಾಗಿದೆ. ಶಬರಿಮಲೆ ವಿಚಾರವನ್ನು ಭಕ್ತರು ನಿರ್ಣಯಿಸಬೇಕು. ಸಾರ್ವಜನಿಕ ಮತ ಸಂಗ್ರಹಕ್ಕೆ ಬಿಡುವುದು ಒಳಿತು.

# ಎನ್​ಡಿಎ ಸರ್ಕಾರ ಮಂದಿರ ನಿರ್ವಿುಸದಿದ್ದರೆ ನಿಮ್ಮ ಮುಂದಿನ ನಿಲುವೇನು?

ವಿಶ್ವ ಹಿಂದು ಪರಿಷತ್ತು ಈ ಬಗ್ಗೆ ತೀರ್ಮಾನ ಮಾಡುತ್ತದೆ. ನಮ್ಮ ನಿಲುವಿಗೆ ಬದ್ಧವಾಗಿರುತ್ತೇವೆ. ಪ್ರಯಾಗದಲ್ಲಿ ನಡೆಯುವ ಕುಂಭಮೇಳದಲ್ಲಿ ಮಂದಿರ ನಿರ್ಮಾಣ ಬಗ್ಗೆ ದೃಢನಿಲುವನ್ನು ಕೈಗೊಳ್ಳುತ್ತೇವೆ. ವಿಶ್ವ ಹಿಂದು ಪರಿಷತ್ ಸಹ ತನ್ನ ನಿರ್ಧಾರ ತಿಳಿಸಲಿದೆ. ಅಷ್ಟರೊಳಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ನಮ್ಮ ಹೋರಾಟದ ರೂಪುರೇಷೆ ಸಿದ್ಧ ಮಾಡಬೇಕಾಗುತ್ತದೆ.

# ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕೂವರೆ ವರ್ಷವಾಯಿತು. ಇಷ್ಟು ವರ್ಷ ಸುಮ್ಮನಿದ್ದವರು ಈಗ ಒತ್ತಾಯಿಸುತ್ತಿರುವಿರಿ. ಮುಂದೆ ಬಿಜೆಪಿ ಸರ್ಕಾರ ಬರುತ್ತದೆ ಎಂಬ ನಂಬಿಕೆ ಇಲ್ಲವೇ?

ಇದು ನಂಬಿಕೆಯ ಪ್ರಶ್ನೆಯಲ್ಲ. ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದೇವೆ. ಮುಂದೆ ಯಾವುದೇ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಬಹುದು. ಎನ್​ಡಿಎ ಸರ್ಕಾರಕ್ಕೆ ಸ್ಪಷ್ಟ ಬಹುಮತವಿದೆ. ವಿರೋಧ ಪಕ್ಷ ಸಹ ಶಕ್ತಿ ಕಳೆದುಕೊಂಡಿದೆ. ಹೀಗಾಗಿ ಈಗ ಎಲ್ಲ ದೃಷ್ಟಿಯಿಂದಲೂ ಉತ್ತಮ ವಾತಾವರಣವಿದೆ ಎಂದು ಮನವರಿಕೆ ಮಾಡಿಕೊಡುತ್ತಿದ್ದೇವೆ. ಆಡಳಿತಾವಧಿ ಅಂತ್ಯವಾಗುತ್ತ ಬಂದರೂ ಮಂದಿರ ನಿರ್ಮಾಣ ವಿಚಾರ ಕೈಗೆತ್ತಿಕೊಳ್ಳದ್ದರಿಂದ ಧ್ವನಿ ಎತ್ತಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.

# ಕಾನೂನು ಮತ್ತು ಧರ್ಮ ಇದರಲ್ಲಿ ಯಾವುದು ದೊಡ್ಡದು?

ಪ್ರಜಾಪ್ರಭುತ್ವದಲ್ಲಿ ಕಾನೂನಿಗಿಂತ ಜನರ ಅಭಿಪ್ರಾಯ ದೊಡ್ಡದು. ಹೀಗಾಗಿ ಮಂದಿರ ನಿರ್ಮಾಣ ವಿಚಾರವಾಗಿ ಸಹ ಸರ್ಕಾರ ಹಾಗೂ ನ್ಯಾಯಾಲಯ ಜನಾಭಿಪ್ರಾಯ ಪರಿಗಣಿಸಬೇಕು. ಕಾನೂನಿಗಿಂತ ಧರ್ಮ ಹಾಗೂ ಧಾರ್ವಿುಕ ಭಾವನೆ ದೊಡ್ಡದಾಗುತ್ತದೆ.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...