More

    VIDEO| ವೈರಲ್​​ ಆಗುತ್ತಿದೆ ಸುಲಭವಾಗಿ ಮೊಟ್ಟೆ ಸಿಪ್ಪೆ ಬಿಡಿಸುವ ವಿಡಿಯೋ: ಒಮ್ಮೆ ನೀವೂ ಟ್ರೈ ಮಾಡಿ ನೋಡಿ…

    ನವದೆಹಲಿ: ಮೊಟ್ಟೆಯೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲ ರುಚಿಯ ಗುಣದಿಂದಲೂ ಮೊಟ್ಟೆ ಆಹಾರ ಪ್ರಿಯವಾಗಿದೆ. ಕೆಲವೊಮ್ಮೆ ಬೇಯಿಸಿದ ಮೊಟ್ಟೆಯ ಸಿಪ್ಪೆಯನ್ನು ಬಿಡಿಸುವುದೆಂದರೆ ಕಿರಿಕಿರಿ. ಆದರೆ ಅದನ್ನು ಸುಲಭವಾಗಿ ಹೇಗೆ ಬಿಡಿಸಬಹುದು ಎಂಬುದನ್ನು ಈ ವೈರಲ್​ ವಿಡಿಯೋ ತೋರಿಸಿದೆ.

    ಹೌದು, ಮೊಟ್ಟೆಯ ಸಿಪ್ಪೆಯನ್ನು ಸುಲಭವಾಗಿ ಬಿಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಕಳೆದ ಭಾನುವಾರ ಪೋಸ್ಟ್​ ಮಾಡಿರುವ ವಿಡಿಯೋವನ್ನು ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಮಂದಿ ಮೊಟ್ಟೆ ಸಿಪ್ಪೆ ಬಿಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ವಿಡಿಯೋ ಕೇವಲ 10 ಸೆಕೆಂಡ್ ಮಾತ್ರವಿದ್ದು, ಅದರಲ್ಲಿನ ಮೊಟ್ಟೆ ಬಿಡಿಸುವ ದೃಶ್ಯಕ್ಕೆ ಎಲ್ಲರೂ ಮಾರುಹೋಗಿದ್ದಾರೆ.

    ವಿಡೀಯೋದಲ್ಲಿ ಏನಿದೆ?: ಮುಖ ಕಾಣದ ಒಬ್ಬ ವ್ಯಕ್ತಿಯು ಪಕ್ಕದಲ್ಲಿಟ್ಟಿದ್ದ ಮೊಟ್ಟೆಯನ್ನು ತೆಗೆದುಕೊಂಡು ಗಾಜಿನ ಲೋಟಕ್ಕೆ ಹಾಕಿಕೊಳ್ಳುತ್ತಾರೆ. ಬಳಿಕ ಗಾಜಿನೊಳಗಡೆ ನೀರು ತುಂಬಿ ಅಡ್ಡಲಾಗಿ ಶೇಕ್​ ಮಾಡುತ್ತಾರೆ. ಬಳಿಕ ಮೊಟ್ಟೆಯನ್ನು ಹೊರ ತೆಗೆದು ಸುಲಭವಾಗಿ ಸಿಪ್ಪೆಯನ್ನು ಬಿಡಿಸುತ್ತಾರೆ.

    ಇದು ನೆಟ್ಟಿಗರು ಗಮನ ಸೆಳೆದಿದ್ದು 3.7 ಮಿಲಿಯನ್​ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 74 ಸಾವಿರಕ್ಕಿಂತ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದಾರೆ. ಹಲವರು ಮೊಟ್ಟೆ ಬಿಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲವರಿಗೆ ಇದು ಸಫಲವಾಗಿದ್ದರೆ, ಇನ್ನು ಕೆಲವರು ವಿಫಲವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಈ ಒಂದು ಕೌಶಲ ಮಾತ್ರ ಸಾಕಷ್ಟು ಮಂದಿಗೆ ಇಷ್ಟವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts