ಗ್ರಾಮಕ್ಕೆ ಬಂದು ಮೃತಪಟ್ಟ ನವಿಲಿನ ಅಂತ್ಯ ಸಂಸ್ಕಾರದ ವೇಳೆ ರಾಷ್ಟ್ರಗೀತೆ ಹಾಡಿದ ಮಕ್ಕಳು, ಗ್ರಾಮಸ್ಥರು

ಧಾರವಾಡ: ರಸ್ತೆ ಬದಿಯಲ್ಲಿ ಬಿದ್ದ ಪ್ರಾಣಿ, ಪಕ್ಷಿಗಳ ಮೃತದೇಹವನ್ನು ನೋಡಿಕೊಂಡು ಹೋಗುವವರೇ ಹೆಚ್ಚು. ಅದರಲ್ಲೂ ಊರಿಗೆ ಬಂದು ಸತ್ತರೆ ತೆಗೆದುಕೊಂಡು ಹೋಗಿ ಕಾಡಿಗೆ ಎಸೆಯುತ್ತಾರೆ. ಆದರೆ ನವಲಗುಂದದಲ್ಲಿ ಮೃತಪಟ್ಟ ನವಿಲಿಗೆ ವಿಭಿನ್ನವಾಗಿ ಅಂತ್ಯಕ್ರಿಯೆ ಮಾಡಿದ್ದಾರೆ.

ಬಾಲ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನವಿಲೊಂದು ಅಸ್ವಸ್ಥಗೊಂಡು ಕಾಡಿನಿಂದ ಬಂದಿತ್ತು. ಅದನ್ನು ನೋಡಿದ ಕೂಡಲೇ ಗ್ರಾಮಸ್ಥರು ಉಪಚಾರ ಮಾಡಿದ್ದಾರೆ. ಆದರೆ ಬದುಕಿ ಉಳಿಯಲಿಲ್ಲ.

ಕಡೆಗೆ ಗ್ರಾಮಸ್ಥರೆಲ್ಲ ಸೇರಿ ಅಂತಿಮ ವಿಧಿ, ವಿಧಾನಗಳನ್ನು ನಡೆಸಿದ್ದಾರೆ. ಹಾಗೇ ನವಿಲು ರಾಷ್ಟ್ರಪಕ್ಷಿಯೆಂಬ ಕಾರಣಕ್ಕೆ ರಾಷ್ಟ್ರಗೀತೆ ಹಾಡುವುದರೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Leave a Reply

Your email address will not be published. Required fields are marked *