blank

ದೇವಾನಂದ್ ಕಡೂರು ಬಿಜೆಪಿ ಮಂಡಲ ಅಧ್ಯಕ್ಷ

blank

ಕಡೂರು: ಕಡೂರು ಬಿಜೆಪಿ ಮಂಡಲದ ಅಧ್ಯಕ್ಷರಾಗಿ ಬಿ.ಪಿ.ದೇವಾನಂದ್ ಅವರನ್ನು ಮರು ಆಯ್ಕೆಗೊಳಿಸಲಾಗಿದೆ ಎಂದು ಬಿಜೆಪಿ ಜಿಲ್ಲಾದ್ಯಕ್ಷ ದೇವರಾಜ್ ಶೆಟ್ಟಿ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸಂಘಟನಾ ಪರ್ವದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಸಂಘಟನೆಗೆ ಪಕ್ಷ ಬೇರು ಮಟ್ಟದಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಕಾರ್ಯಕರ್ತರೇ ಶಕ್ತಿಯಾಗಿರುವ ಬಿಜೆಪಿ ಪಕ್ಷದಲ್ಲಿ ಮತ್ತಷ್ಟು ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು.
ಅಧ್ಯಕ್ಷ ಬಿ.ಪಿ.ದೇವಾನಂದ್ ಮಾತನಾಡಿ, ಪಕ್ಷ ಬಲವರ್ಧನೆಗೆ ಹೆಚ್ಚು ಒತ್ತು ನೀಡಿ ಕಾರ್ಯನಿರ್ವಹಿಸಲಾಗುತ್ತದೆ. ನನ್ನ ಸೇವೆ ಪರಿಗಣಿಸಿ ಪಕ್ಷದ ಹಿರಿಯರು ಮತ್ತೊಮ್ಮೆ ಮಂಡಲದ ಜವಬ್ದಾರಿ ನೀಡಿದ್ದಾರೆ. ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅವರ ಸಾರಥ್ಯದಲ್ಲಿ ಜಿಲ್ಲಾ ಬಿಜೆಪಿ ಮುಖಂಡರ ಸಲಹೆ, ಮಾರ್ಗದರ್ಶನದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲಾಗುತ್ತದೆ ಎಂದರು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಮಹಿಳಾ ಮೋರ್ಚಾದ ವೀಣಾ ಶೆಟ್ಟಿ, ಸುನೀತಾ ಜಗದೀಶ್, ಸವಿತಾ ರಮೇಶ್, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸುಧಾ ಉಮೇಶ್, ಟಿ.ಆರ್.ಲಕ್ಕಪ್ಪ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಭರತ್ ಕೆಂಪರಾಜ್ ಸೇರಿದಂತೆ ಮತ್ತಿತರಿದ್ದರು.

Share This Article

ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ತುಪ್ಪವನ್ನು ತಿನ್ನಲೇ ಬಾರದು ಗೊತ್ತಾ? ghee benefits and risks

ಬೆಂಗಳೂರು: ( ghee benefits and risks) ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು.  ತುಪ್ಪ ಹಲವು…

ಬಿಸಿಲಿನ ವಾತಾವರಣದಲ್ಲಿ ನಿಮ್ಮ ಕಾರಿನೊಳಗೆ ತಂಪಾಗಿರಲು ಬಯಸುವಿರಾ? ಈ ಟ್ರಿಕ್ ಟ್ರೈ ಮಾಡಿ.. Summer Car Tips

ಬೆಂಗಳೂರು: (Summer Car Tips ) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿಇಂದ ರಕ್ಷಣೆ ಪಡೆಯಲು…

ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್​ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol

Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್​ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…