ಅಧ್ಯಾತ್ಮದಿಂದ ಶಾಂತಿ, ನೆಮ್ಮದಿ ಸಾಧ್ಯ

gld 1-1

ಗುಳೇದಗುಡ್ಡ: ಮನುಷ್ಯನಿಗೆ ಶಾಂತಿ, ನೆಮ್ಮದಿಯಿಂದ ಬದುಕಬೇಕಾದರೆ ಅಧ್ಯಾತ್ಮ ಅತ್ಯಗತ್ಯ ಎಂದು ಮುರುಘಾಮಠದ ಶ್ರೀ ಕಾಶೀನಾಥ ಸ್ವಾಮಿಗಳು ಹೇಳಿದರು.

ಸಮೀಪದ ಕೋಟೆಕಲ್ ಗ್ರಾಮದಲ್ಲಿ ಈಶ್ವರಿ ವಿಶ್ವ ವಿದ್ಯಾಲಯದ ಪ್ರಭು ಪಸಂದ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾನವನ ಆಲೋಚನೆಗಳು, ಚಿಂತನೆಗಳು ಭೌತಿಕ ವಸ್ತು ಮತ್ತು ವಿಷಯದ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದರಿಂದ ಮಾನವ ಅಶಾಂತಿ, ನೋವು, ಕಷ್ಟ, ನಷ್ಟ, ನೆಮ್ಮದಿರಹಿತ ಬದುಕಿನತ್ತ ಸಾಗುತ್ತಿದ್ದಾನೆ. ಅವನಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿದೆ. ಇಂತಹ ಈಶ್ವರಿ ವಿಶ್ವ ವಿದ್ಯಾಲಯದ ಕೇಂದ್ರಗಳು ಮನುಷ್ಯನಿಗೆ ಏಕಾಗ್ರತೆ ನೀಡಿ, ಬದುಕಿನ ಸುಗಮ ಮಾರ್ಗದ ಕಡೆಗೆ ಒಯ್ಯಲು ಸಹಕರಿಸುತ್ತವೆ ಎಂದರು.

ಡಯಟ್ ಜಿಲ್ಲಾ ಉಪನಿರ್ದೇಶಕ ಬಿ.ಕೆ. ನಂದನೂರ, ಬಾಗಲಕೋಟೆಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ವೈ. ಬಸಾಪೂರ ಮಾತನಾಡಿದರು.

ಜಮಖಂಡಿ ಹಾಗೂ ಗೋಕಾಕ ಸೇವಾ ಕೇಂದ್ರದ ರಾಜಯೋಗಿನಿ ಬ್ರಹ್ಮಕುಮಾರಿ ಮೀರಾ ಅಕ್ಕನವರು ಅಧ್ಯಕ್ಷತೆ ವಹಿಸಿದ್ದರು. ಬೈಲಹೊಂಗಲ ಸೇವಾಕೇಂದ್ರದ ರಾಜಯೋಗಿನಿ ಬ್ರಹ್ಮಕುಮಾರಿ ಪ್ರಭಾ ಅಕ್ಕ ಭವನ ಉದ್ಘಾಟಿಸಿದರು.

ಕೋಟೆಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಮೇಟಿ, ರಾಜಸ್ಥಾನದ ಅಬು ಪರ್ವತದ ರಾಜಯೋಗಿ ಬಿ. ಕೆ. ನಾಗೇಶ, ರಾಜಯೋಗಿ ಬಿ.ಕೆ. ಅಚ್ಚುತ, ರಾಜಯೋಗಿ ಭಗವಾನ್ ಭಾಯೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಶ್ರೀಮಂತ ಜಿ.ಎಸ್. ದೇಸಾಯಿ, ಕೋಟೆಕಲ್ ಗ್ರಾಪಂ ಪಿಡಿಒ ಆರತಿ ಕ್ಷತ್ರಿ, ಹೃದಯರೋಗ ತಜ್ಞ ಡಾ. ಚಂದ್ರಕಾಂತ ಜವಳಿ, ಶ್ರೀನಿವಾಸ ಇನಾನಿ, ಡಾ. ಬಸವರಾಜ ಬಂಟನೂರ, ಪಿ.ಎನ್. ಪವಾರ, ಡಾ. ಕೃಷ್ಣವರ್ಧನ, ಪಿ.ಎನ್. ಬಡಿಗೇರ, ಮನೋಹರ ಪತ್ತಾರ, ಶ್ರೀಕಾಂತ ಧಾರವಾಡ, ಮಹೇಶ ಬಿಜಾಪೂರ, ರವೀಂದ್ರ ಅಂಗಡಿ, ಪಿ.ಸಿ. ಬೆಟಗೇರಿ ಪ್ರಗತಿಪರ ರೈತರಾದ ಕಲ್ಲಪ್ಪ ಕೆಲೂರ, ರಂಗಪ್ಪ ಸೀತಿಮನಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share This Article

ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಿಗಳಿಂದ ಬರಲಿದ್ಯಾ ಅದೃಷ್ಟ.. dreams

dreams: ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಕನಸುಗಳು ಬಹಳ ಮುಖ್ಯ. ಕನಸಿನಲ್ಲಿ ಗಿಳಿ, ಗೂಬೆ, ನವಿಲು ಮುಂತಾದ…

ಪ್ರತಿದಿನ ಊಟಕ್ಕೆ ಗರಿಗರಿ ಹಪ್ಪಳ ಬೇಕಾ? ಹಾಗಿದ್ರೆ ಆರೋಗ್ಯ ಬಗ್ಗೆ ಇರಲಿ ಎಚ್ಚರ..papad

papad: ಹಪ್ಪಳಗಳನ್ನು ಊಟದಲ್ಲಿ ರುಚಿ ಇರಲಿ ಎಂಬ ಕಾರಣಕ್ಕೆ ಬಳಸುತ್ತಾರೆ. ಹಾಗಾಗಿ ಊಟಕ್ಕೆ ರುಚಿ ಇದೆ…

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…