ಅಭಿವೃದ್ಧಿಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿ

ಎನ್.ಆರ್.ಪುರ: ತಾಲೂಕಿನ ಎಲ್ಲ ಗ್ರಾಪಂಗಳೂ ಸರ್ಕಾರಿ ಯೋಜನೆ ಅನುಷ್ಠಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾಪಂ ಅಧ್ಯಕ್ಷೆ ಈ.ಸಿ.ಜಯಶ್ರೀ ಮೋಹನ ಪಿಡಿಒಗಳಿಗೆ ಸೂಚಿಸಿದರು.

ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ತಾಲೂಕಿನ ಎಲ್ಲ್ಲ ಗ್ರಾಪಂಗಳೂ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಜಿಪಂ ಸಭೆಗಳಲ್ಲಿ ನಮ್ಮ ತಾಲೂಕು ಹಿಂದುಳಿದಿರುವ ಬಗ್ಗೆ ಚರ್ಚೆಯಾಗುತ್ತದೆ. ಮುಂದೆ ಇದಕ್ಕೆ ಅವಕಾಶ ನೀಡಬಾರದು ಎಂದರು.

ಎಲ್ಲ ಗ್ರಾಪಂಗಳಲ್ಲಿ ಸಂಪೂರ್ಣವಾಗಿ ತೆರಿಗೆ ವಸೂಲಾತಿ ನಡೆಯಬೇಕು. ಸರ್ಕಾರ ಯೋಜನೆಗಳ ಪ್ರಗತಿ ಉತ್ತಮವಾಗಿರಬೇಕು. ಮುಂದಿನ ಸಭೆಗೆ ಇಂದಿನ ಶೇಕಡವಾರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಿರಬೇಕು. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಸದಸ್ಯ ಜಿ.ಎಸ್.ಪ್ರವೀಣ್ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಜನಪ್ರತಿನಿಧಿಗಳ ಗಮನಕ್ಕೆ ತರದೆ ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಗ್ಯಾಸ್​ಏಜೆನ್ಸಿ ಮೂಲಕ ಸಿಲಿಂಡರ್ ವಿತರಿಸಲಾಗುತ್ತಿದೆ. ಇನ್ನು ಮುಂದೆ ಗ್ರಾಪಂ, ತಾಪಂ ಮೂಲಕವೇ ಗ್ಯಾಸ್ ವಿತರಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿರಸ್ತೇದಾರ್ ನಾಗೇಂದ್ರ ನಾಯ್್ಕ , ಹಿಂದಿನ ಶಾಸಕರ ಅವಧಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಈಗ ಗ್ಯಾಸ್ ವಿತರಿಸಲಾಗುತ್ತಿದೆ. ಗ್ಯಾಸ್ ವಿತರಿಸುವಾಗ ಕಚೇರಿಯಲ್ಲಿ ಬಯೋಮೆಟ್ರಿಕ್ ನೀಡಿ ಫಲಾನುಭವಿಗಳು ಗ್ಯಾಸ್ ಪಡೆಯಬೇಕು ಎಂಬ ನಿಯಮವಿದೆ. ಕೆಲವು ಫಲಾನುಭವಿಗಳಿಗೆ ಹಾಲಿ ಶಾಸಕರ ಕಾರ್ಯಕ್ರಮಗಳಲ್ಲಿ ವಿತರಣೆ ಮಾಡಲಾಗಿದೆ ಎಂದರು.

ಮಾಗುಂಡಿ ಗ್ರಾಪಂ ಅಧ್ಯಕ್ಷ ಆಬ್ದುಲ್ ವಹೀದ್ ಅಹಮದ್ ಮಾತನಾಡಿ, ಎಲ್ಲ ಇಲಾಖೆ ಅಧಿಕಾರಿಗಳೂ ಸರಿಯಾಗಿ ಕಚೇರಿಗೆ ಆಗಮಿಸುವುದಿಲ್ಲ. ಯೋಜನೆಗಳ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್, ಸದಸ್ಯರಾದ ಸುಶೀಲಾ, ಪ್ರೇಮಾ, ಭಾಗ್ಯಲಕ್ಷ್ಮೀ, ಟಿ.ಎಂ.ನಾಗೇಶ್, ಟಿ.ಪಿ.ಸುಧಾಕರ್ ಆಚಾರಿ, ಇಒ ಕೆ.ಹೊಂಗಯ್ಯ, ಕಚೇರಿ ವ್ಯವಸ್ಥಾಪಕಿ ಕೆ.ಪಿ.ಮೀನಾಕ್ಷಿ ಇದ್ದರು.

ಕೆಡಿಪಿ ಸಭೆಗೆ ಆಹ್ವಾನ ನೀಡಿ: ಮಾಸಿಕ ಕೆಡಿಪಿ ಸಭೆಗೆ ನಮಗೂ ಆಹ್ವಾನ ನೀಡಿ. ಎರಡು ತಿಂಗಳಿಗೊಮ್ಮೆ ನಡೆಯುವ ಸಾಮಾನ್ಯ ಸಭೆಗೆ ಮಾತ್ರ ಆಹ್ವಾನವಿದೆ. ನಮ್ಮ ಭಾಗದ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಸದಸ್ಯೆ ಕೆ.ಪಿ.ಮೀನಾಕ್ಷಿ ಕಾಂತರಾಜ್, ಜಿ.ಎಸ್.ಪ್ರವೀಣ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಈ.ಸಿ.ಜಯ ಶ್ರೀ ಮಾತನಾಡಿ, ಕೆಡಿಪಿ ಸಭೆಗೆ ಎಲ್ಲ್ಲ ಸದಸ್ಯರನ್ನೂ ಕರೆಯಬೇಕು ಎಂಬ ನಿಯಮವಿಲ್ಲ. ನಾನು ಯಾವುದೇ ಕಾರಣಕ್ಕೂ ಕೆಡಿಪಿ ಸಭೆಗೆ ಆಹ್ವಾನಿಸುವುದಿಲ್ಲ. ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದರೆ ಸಭೆಯಲ್ಲಿ ನಾನು ರ್ಚಚಿಸುತ್ತೇನೆ. ಕೆಡಿಪಿ ಸಭೆಗೆ ಎಲ್ಲರನ್ನೂ ಕರೆದರೆ ಕೆಡಿಪಿಗೂ ಸಾಮಾನ್ಯ ಸಭೆಗೂ ವ್ಯತ್ಯಾಸವಿರುವುದಿಲ್ಲ ಎಂದು ಸಮಜಾಯಿಷಿ ನೀಡಿದರು.</