ಗ್ರಾಮಸ್ಥರಿಗೆ ಕುಡಿವ ನೀರಿಲ್ಲವೆಂದು ಬೋರ್​ವೆಲ್​ ದುರಸ್ತಿ ಮಾಡಿಸಲು ಸ್ಥಳಕ್ಕೆ ತೆರಳಿದ್ದ ಗ್ರಾಪಂ ಪಿಡಿಒ ಸಾವು

ಬಳ್ಳಾರಿ: ಬೋರ್​ವೆಲ್​ ದುರಸ್ತಿ ಮಾಡಿಸುತ್ತ ನಿಂತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅದಿರು ಲಾರಿ ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲ್ಲಹಳ್ಳಿ ಸಮೀಪ ನಡೆದಿದೆ.

ಪಿಡಿಒ ವೆಂಕಟಲಕ್ಷ್ಮೀ (38) ಮೃತರು. ಕಲ್ಲಹಳ್ಳಿಯಲ್ಲಿ ಕುಡಿಯಲು ನೀರಿಲ್ಲದ ಕಾರಣ ಅಲ್ಲಿನ ಜನರು ಚುನಾವಣೆ ಬಹಿಷ್ಕರಿಸಿದ್ದರು. ಹಾಗಾಗಿ ವೆಂಕಟಲಕ್ಷ್ಮೀ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಅಲ್ಲಿಯೇ ಇದ್ದ ಬೋರ್​ ವೆಲ್​ ಹಾಳಾಗಿದ್ದರಿಂದ ಅದನ್ನು ದುರಸ್ತಿ ಮಾಡಿಸುತ್ತ ರಸ್ತೆ ಬದಿಯಲ್ಲಿ ನಿಂತಿದ್ದರು.
ಅಪಘಾತದ ನಂತರ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.