ಕೋಟ: ಇಲ್ಲಿನ ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಮಾಬುಕಳ ಸೇತುವೆ ಬಳಿ ತ್ಯಾಜ್ಯ ಎಸೆಯುತ್ತಿದ್ದ ಕಲ್ಯಾಣಪುರ ಗ್ರಾಪಂ ನಿವಾಸಿಯನ್ನು ಸೋಮವಾರ ಕೋಡಿ ಪಿಡಿಒ ರೆಡ್‌ಹ್ಯಾಂಡ್ ಆಗಿ ಹಿಡಿದು ಆತನಿಂದಲೇ ಕಸ ವಿಲೇವಾರಿ ಮಾಡಿಸಿದ್ದಾರೆ.


ಕೋಟತಟ್ಟು ಹಾಗೂ ಕೋಡಿ ಪಿಡಿಒ ರವೀಂದ್ರ ರಾವ್ ಅವರು ಕಲ್ಯಾಣಪುರದ ವ್ಯಕ್ತಿಯೋರ್ವ ಸೀತಾ ನದಿಗೆ ತ್ಯಾಜ್ಯ ಎಸೆಯುತ್ತಿರುವ ಸಂದರ್ಭದಲ್ಲಿ ಹಿಡಿದು ಆತನಿಂದಲೇ ತ್ಯಾಜ್ಯ ಪುನರ್ ತೆಗೆಯುವಂತೆ ಮಾಡಿ ಸ್ಥಳೀಯಾಡಳಿತ ಹಂದಾಡಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ ಪರಿಸರ ಜಾಗೃತಿ ಮೆರೆದಿದ್ದಾರೆ. ಅಧಿಕಾರಿಯ ಕರ್ತವ್ಯನಿಷ್ಠೆ ಇತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾದರಿಯಾಗಿದೆ.
