More

    ಇಂದು ಪಿಬಿಎಲ್ ಆರಂಭ

    ಬೆಂಗಳೂರು: ವಿಶ್ವದ ಅತಿ ಶ್ರೀಮಂತ ಬ್ಯಾಡ್ಮಿಂಟನ್ ಲೀಗ್ ಎಂಬ ಖ್ಯಾತಿಗಳಿಸಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನ (ಪಿಬಿಎಲ್) 5ನೇ ಆವೃತ್ತಿಗೆ ಇಂದು ಚೆನ್ನೈನಲ್ಲಿ ಚಾಲನೆ ಸಿಗಲಿದೆ. ಎರಡು ವರ್ಷಗಳ ಬಳಿಕ ಚೆನ್ನೈನಲ್ಲಿ ಲೀಗ್ ನಡೆಯುತ್ತಿದ್ದು, ಭಾರತದ ಸ್ಟಾರ್ ಷಟ್ಲರ್​ಗಳಾದ ಪಿವಿ ಸಿಂಧು, ಬಿ. ಸಾಯಿ ಪ್ರಣೀತ್, ಮಾಜಿ ವಿಶ್ವ ನಂ.1 ತೈ ಜು ಯಿಂಗ್ ಲೀಗ್​ನ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

    ಇಂದು ಪಿಬಿಎಲ್ ಆರಂಭ6 ಕೋಟಿ ಬಹುಮಾನ ಮೊತ್ತದ ಲೀಗ್ ಮುಂದಿನ 21 ದಿನಗಳ ಕಾಲ ಬ್ಯಾಡ್ಮಿಂಟನ್ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ಬೆಂಗಳೂರಿಗೆ ಕಡೇ ಕ್ಷಣದಲ್ಲಿ ಆತಿಥ್ಯ ಕೈತಪ್ಪಿದ ಹಿನ್ನೆಲೆಯಲ್ಲಿ ಮೂರು ನಗರಗಳಲ್ಲಷ್ಟೇ ಈ ಬಾರಿ ಲೀಗ್ ಆಯೋಜಿಸಲಾಗುತ್ತಿದೆ. ಜನವರಿ 25 ರಿಂದ 28ರವರೆಗೆ ಲಖನೌ ಹಾಗೂ ಜನವರಿ 29 ರಿಂದ ಫೆಬ್ರವರಿ 9ರವರೆಗೆ ಹೈದರಾಬಾದ್​ನಲ್ಲಿ ಲೀಗ್ ಹಾಗೂ ಸೆಮಿಫೈನಲ್ಸ್, ಫೈನಲ್ ನಡೆಯಲಿದೆ. ಒಂದು ಪಂದ್ಯದಲ್ಲಿ ಪುರುಷರ ಸಿಂಗಲ್ಸ್ ವಿಭಾಗದಿಂದ 2 ಪಂದ್ಯ, ಮಹಿಳೆಯರ ಸಿಂಗಲ್ಸ್ ಪುರುಷರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗದಿಂದ ತಲಾ ಒಂದು ಪಂದ್ಯಗಳ ಒಳಗೊಂಡಿರುತ್ತದೆ.

    ಸ್ಟಾರ್​ಗಳ ಉಪಸ್ಥಿತಿ: ಪಿವಿ ಸಿಂಧು, ತೈಜು ಯಿಂಗ್, ಸಾಯಿ ಪ್ರಣೀತ್ ಅಲ್ಲದೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಕ್ರಿಶ್ಚಿನಾ ಪೆಡೆರ್ಸನ್ (ಮಹಿಳೆಯರ ಡಬಲ್ಸ್), ಮಾಜಿ ವಿಶ್ವ ನಂ.9 ತಾನೋಂಗ್ಸಕ್ ಸಿಯನ್ಸೋಮ್ೂನ್ಸುಕ್, ಭಾರತ ಅನುಭವಿ ಷಟ್ಲರ್​ಗಳಾದ ಪಿ.ಕಶ್ಯಪ್, ಲಕ್ಷ್ಯ ಸೇನ್ ಕಣಕ್ಕಿಳಿಯಲಿದ್ದಾರೆ.

    ಸೈನಾ, ಕೆ.ಶ್ರೀಕಾಂತ್ ಗೈರು: ಒಲಿಂಪಿಕ್ಸ್ ಸಿದ್ಧತೆ ಹಿನ್ನೆಲೆಯಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾಂತ್ ಲೀಗ್​ನಿಂದ ಹೊರಗುಳಿದರೆ, ಕನ್ನಡತಿ ಅಶ್ವಿನಿ ಪೊನ್ನಪ್ಪ ಯಾವುದೇ ತಂಡಕ್ಕೆ ಸೇಲಾಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts