ಬಾಕಿ ವೇತನ ತಿಂಗಳೊಳಗೆ ಪಾವತಿ

ಬಂಕಾಪುರ: ಪಟ್ಟಣದ ಪೌರ ಕಾರ್ವಿುಕರ ಬಾಕಿ ಇರುವ ವೇತನವನ್ನು ಸರ್ಕಾರ ತಿಂಗಳೊಳಗೆ ಪಾವತಿಸಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹೇಳಿದರು.

ಪಟ್ಟಣದ ಪುರಸಭೆಯಲ್ಲಿ ಭಾನುವಾರ ಪೌರ ಕಾರ್ವಿುಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ವಿುಕರು ಪುರಸಭೆಯ ಆಸ್ತಿ. ಪೌರ ಕಾರ್ವಿುಕರು ನಿತ್ಯ ಪಟ್ಟಣವನ್ನು ಸ್ವಚ್ಛಗೊಳಿಸದಿದ್ದರೆ ಪಟ್ಟಣದ ನೈರ್ಮಲ್ಯ, ಸೌಂದರ್ಯದ ಜೊತೆಗೆ ನಮ್ಮೆಲ್ಲರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅವರಿಗೆ ಸಾಮಾಜಿಕ ಭದ್ರತೆ ಒದಗಿಸಿದರೆ ಅವರ ಬದುಕು ಉತ್ತಮವಾಗುತ್ತದೆ. ಕಾಯಂ ಪೌರ ಕಾರ್ವಿುಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜೀವ ವಿಮಾ ಸೌಲಭ್ಯ, ಕೌಟುಂಬಿಕ ಭದ್ರತೆ, ಆರೋಗ್ಯದ ದೃಷ್ಟಿಯಿಂದ ರೋಗ ನಿರೋಧಕ ಚುಚ್ಚು ಮದ್ದುಗಳು, ಗೃಹಭಾಗ್ಯ ಯೋಜನೆಯಡಿ ಸಹಾಯಧನ ಸೇರಿ ಹಲವಾರು ಯೋಜನೆ ಜಾರಿ ಮಾಡಿದೆ. ಇದಲ್ಲದೆ ಎಂದರು.

ಈ ಪೂರ್ವದಲ್ಲಿ ಪೌರ ಕಾರ್ವಿುಕರ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಕೀರ್ತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಶ್ಮೀತಾ ಕಟ್ಟಿಮನಿ ಪ್ರಥಮ, ದಿ.ಮಾಡರ್ನ್ ಇಂಗ್ಲಿಷ್ ಹೈಸ್ಕೂಲಿನ ವಿದ್ಯಾರ್ಥಿನಿ ರಾಧಿಕಾ ಕಲಾಲ ದ್ವಿತೀಯ ಸ್ಥಾನ, ಎಸ್.ಎ.ಕ್ಯೂ ಪ್ರೌಢಶಾಲೆಯ ವಿದ್ಯಾರ್ಥಿ ಎಸ್.ಎ.ಹೆಬಸೂರ ತೃತೀಯ ಸ್ಥಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕದ ಜೊತೆ ಚಿತ್ರಕಲಾ ನೋಟ್​ಪುಸ್ತಕ ವಿತರಿಸಿಲಾಯಿತು. ನಂತರ ಪುರಸಭೆಯ ಎಲ್ಲ ಪೌರ ಕಾರ್ವಿುಕರನ್ನು ಸನ್ಮಾನಿಸಿ, ಕಾಯಂ ಕಾರ್ವಿುಕರಿಗೆ ಗೌರವಧನ ವಿತರಿಸಲಾಯಿತು.

ಪುರಸಭೆ ಅಧ್ಯಕ್ಷೆ ಶಾಬಿರಾಭಿ ಯಲಗಚ್ಚ ಅಧ್ಯಕ್ಷತೆ ವಹಿಸಿದ್ದರು. ಶಾಂತವೀರಯ್ಯ ಗಚ್ಚಿನಮಠ, ಉಮೇಶ ಮಾಳಗಿಮನಿ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು. ಸಿಬ್ಬಂದಿ ಬೀರಪ್ಪ ಗಿಡ್ಡಣ್ಣವರ ಕಾರ್ಯಕ್ರಮ ನಿರೂಪಿಸಿದರು.