ಬೆಂಗಳೂರು: ಅಕ್ರಮ ನೋಂದಣಿ ತಡೆ, ರೈತರಿಗೆ ನೆರವು ನೀಡಲು ಉದ್ದೇಶಿತ ಪಹಣಿಗಳಿಗೆ ಆಧಾರ್ ಜೋಡಣೆ ಗುರಿ ಸಾಧನೆ ಸಾಧ್ಯವಾಗಿದೆ. ತ್ವರಿತ ಕಾರ್ಯಸಾಧನೆಗೆ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಗೌರವ ಸಂಭಾವನೆ ನಿಗದಿಪಡಿಸಿ ಆದೇಶಿಸಲಾಗಿದೆ.
ಮಹತ್ವಾಕಾಂಕ್ಷಿ ಯೋಜನೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ, ಶ್ರಮಿಸಿದ ಗ್ರಾಮ ಆಡಳಿತ ಅಧಿಕಾರಿ ಮತ್ತು ಗ್ರಾಮ ಸಹಾಯಕರಿಗೆ ಪ್ರತಿ ಒಂದು ಆಧಾರ್ ಜೋಡಣೆಗೆ ತಲಾ ಒಂದು ರೂ. ಸಂಭಾವನೆ ನೀಡಬೇಕೆಂದು ನಿರ್ಧರಿಸಿ, ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ವಿ.ವಿ.ಗಳ ಪ್ರಾಮಾಣಿಕ ಕೆಲಸ ಪರಿಣಾಮ ಇದೇ ಜ.31ರವರೆಗೆ 2.22 ಕೋಟಿ ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಣೆ ಸಾಧ್ಯವಾಗಿದೆ. ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಹಲವು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
4.45 ಕೋಟಿ ರೂ. ಬಳಕೆ
ಭೂ ಸುರಕ್ಷಾ ಯೋಜನೆಯಡಿ ಈಗಾಗಲೇ ಪಿಎ್ಎಂಎಸ್ ಮೂಲಕ ಬಿಡುಗಡೆ ಮಾಡಿದ ಅನುದಾನದಲ್ಲಿ 4.45 ಕೋಟಿ ರೂ.ಗಳನ್ನು ಗೌರವ ಸಂಭಾವನೆ ಪಾವತಿಗೆ ಬಳಸಬೇಕು ಎಂದು ನಿರ್ಧರಿಸಿ ಮಾರ್ಗಸೂಚಿ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ 31-1-2025ರವರೆಗೆ ಆಧಾರ್ ಜೋಡಣೆ ಕಾರ್ಯನಿರ್ವಹಿಸಿದ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರಿಗೆ ಸಂಭಾವನೆ ನಿಗದಿಯಾಗಿದೆ. ಉದಾಹರಣೆಗೆ ಒಂದು ಸಾವಿರ ಆಧಾರ್ ಜೋಡಣೆಗೆ ಎರಡು ಸಾವಿರ ರೂ. ನೀಡಲಾಗುತ್ತಿದೆ. ಈ ಪೈಕಿ ಅಯಾ ಕಂದಾಯ ವೃತ್ತದ ಒಬ್ಬ ಗ್ರಾಮ ಅಡಳಿತ ಅಧಿಕಾರಿ, ಗ್ರಾಮ ಸಹಾಯಕರಿಗೆ ತಲಾ ಒಂದು ಸಾವಿರ ರೂ. ಪಾವತಿಸುವುದು.
ಜೋಡಣೆ ಕಾರ್ಯದ ಬಗ್ಗೆ ತಹಸೀಲ್ದಾರರಿಂದ ಮಾಹಿತಿ ಪಡೆದು ಕಟ್ಟುನಿಟ್ಟಾಗಿ ಪರಿಶೀಲಿಸಿ ಕಾರ್ಯನಿರ್ವಹಿಸಿದ ಅವಧಿಗೆ ತಕ್ಕಂತೆ ಸಂಭಾವನೆ ಪಾವತಿಗೆ ಕ್ರಮ. ಬ್ಯಾಂಕ್ ಖಾತೆಗೆ ಈ ಮೊತ್ತ ಜಮಾ ಮಾಡಿ ಅನುದಾನ ಬಿಡುಗಡೆ ಮತ್ತು ಪಾವತಿ ವಿಷಯದ ಬಗ್ಗೆ ೆ.21ರೊಳಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಕೃಷ್ಣಬೈರೇಗೌಡ ನಿರ್ದೇಶಿಸಿದ್ದಾರೆ.