More

    ಜನಮತ: ಉದ್ಯೋಗಸೃಷ್ಟಿಯತ್ತ ಗಮನ ಹರಿಸಿ

    ಕೇಂದ್ರ, ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸುತ್ತ, ವಿಭಿನ್ನ ಆಶ್ವಾಸನೆಗಳನ್ನು ನೀಡುತ್ತಿವೆ. ಆದರೆ, ಕಳೆದ ಎರಡು ವರ್ಷದಲ್ಲಿ ಕರೊನಾ ಸಾಂಕ್ರಾಮಿಕತೆ ಹಾವಳಿಯ ಪರಿಣಾಮ ಉದ್ಯೋಗನಷ್ಟ ದೊಡ್ಡ ಪ್ರಮಾಣದಲ್ಲಿ ಆಗಿದ್ದು, ಮಧ್ಯಮವರ್ಗಿಯ ಕುಟುಂಬದವರು ಆರ್ಥಿಕವಾಗಿ ಇನ್ನಷ್ಟು ಬಳಲಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ಯುವಕರು, ಯುವತಿಯರು ಉದ್ಯೋಗಕ್ಕೆ ಪರದಾಡುವಂತಾಗಿದೆ. ಸರ್ಕಾರದ ಇತ್ತೀಚಿನ ವರದಿಯ ಪ್ರಕಾರವೇ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಜನಪ್ರಿಯತೆಗಾಗಿ ಘೋಷಿಸುವ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿಯುವ ಸರ್ಕಾರ, ಉದ್ಯೋಗಸೃಷ್ಟಿ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಹೆಜ್ಜೆ ಇರಿಸುತ್ತಿಲ್ಲ. ರಾಜ್ಯದಲ್ಲಂತೂ ಸರ್ಕಾರದ ಯಾವುದೇ ನೇಮಕಾತಿಯಲ್ಲೂ ಭ್ರಷ್ಟಾಚಾರ, ಅವ್ಯವಹಾರ ತಾಂಡವವಾಡುತ್ತಿದೆ. ಯುವಕರನ್ನು ದೇಶದ ಶಕ್ತಿ ಎಂದು ಹೊಗಳುವ ರಾಜಕೀಯ ನಾಯಕರು ಮೊದಲು ಉದ್ಯೋಗಸೃಷ್ಟಿ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ.

    | ಗಗನ್​, ಚಿಕ್ಕಮಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts