ಸಿನಿಮಾ

ಮಠಗಳಿಂದ ಸಮಾಜ ಪರಿವರ್ತನೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸಮಾಜವನ್ನು ಪರಿವರ್ತನೆ ಮಾಡುವ ಮಹತ್ವದ ಶಕ್ತಿ ಮಠಗಳಿಗಿವೆ ಎಂದು ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರಪುರಿ ಸ್ವಾಮೀಜಿ ಹೇಳಿದರು.
ಬೆಂಗಳೂರು ಉತ್ತರ ತಾಲೂಕಿನ ನಗರೂರು ಗ್ರಾಮದ ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನದಲ್ಲಿ ಆಯೋಜಿಸಿದ್ದ ಪೀಠಾರೋಹಣ ಹಾಗೂ ಪಟ್ಟಾಭಿಭಿಷೇಕ ಮಹೋತ್ಸವದಲ್ಲಿ ಮಾತನಾಡಿದರು.
ಸಮಾಜದಲ್ಲಿ ವಾಸಮಾಡುತ್ತಿರುವ ಪ್ರತಿಯೊಂದು ಸಮುದಾಯಕ್ಕೆ ಗುರುಪೀಠ ಸ್ಥಾಪನೆಯಾಗಿದೆ. ಆದರೆ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಗಾಣಿಗ ಸಮುದಾಯಕ್ಕೆ ಗುರುಪೀಠ ಇಲ್ಲದಿದ್ದದ್ದು ಸಮುದಾಯದವರೇ ಕಾರಣ. ಸಮುದಾಯ ಏಳಿಗೆ ಇತಿಹಾಸವನ್ನು ಜಗತ್ತಿಗೆ ತಿಳಿಸುವ ಕಾಯಕ ಶ್ರೀಮಠಗಳಿಂದ ನಡೆಯುತ್ತದೆ. ಕಾವಿ ಧರಿಸುವುದು ಸಾಮಾನ್ಯ ಸಂಗತಿಯಲ್ಲ. ಕಾವಿ ಧರಿಸಿದ ಮೇಲೆ ಜವಾಬ್ದಾರಿ ನಿಭಾಯಿಸುವುದು ಮುಖ್ಯ ಎಂದರು.

ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಶ್ರೀ ಪೂರ್ಣಾನಂದಪುರಿ ಮಹಾಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ಗುರುಪೀಠ ಮಾಡಬೇಕು ಎಂಬ ಆಶಯವಿದ್ದು, ಸಾಕಷ್ಟು ಬಾರಿ ಪ್ರಯತ್ನಿಸಿದ್ದರು ಆಶಯ ಈಡೇರಿರಲಿಲ್. ಆಶ್ರಮದ ಶ್ರೀಗಳನ್ನು ಸೂಚಿಸಿದ್ದ ಹಿನ್ನಲೆ ಸಮುದಾಯದ ಅಭಿವೃದ್ಧಿಗಾಗಿ ಮೇ 6ರಂದು ದೀಕ್ಷೆ ಸ್ವೀಕರಿಸಲಾಗಿದೆ. ಬಿಎಸ್‌ವೈ ಸಿಎಂ ಆಗಿದ್ದಾಗ ಸಮುದಾಯದ ಒಳಿತಿಗೆ ಭೂಮಿ ಮಂಜೂರು ಮಾಡಿದ್ದರು. ಬಳಿಕ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಠದ ಅಭಿವೃದ್ಧಿಗೆ ಅನುದಾನ ನೀಡಿದ್ದರು ಎಂದರು.
ಪಟ್ಟಾಭಿಷೇಕದ ಮೊದಲನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಶ್ರೀಮಠದಲ್ಲಿ ಹೋಮ, ವಿಶೇಷ ಪೂಜೆ ಹಾಗೂ ಪುಷ್ಪಲಂಕಾರ ಸೇರಿ ವಿವಿಧ ದಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಟಿ.ರಂಗರಾಜು, ಟ್ರಸ್ಟಿ ಎಂ.ಆರ್.ರಾಜಶೇಖರ್, ಬಿ.ಎ.ನರಸಿಂಹಯ್ಯ, ವಿ.ಮುನಿಶೆಟ್ಟಿ. ಕೆ.ಆರ್.ಚನ್ನಕೇಶವಶೆಟ್ಟಿ, ಮುಖಂಡ ಕೆಂಪಣ್ಣ, ಪ್ರಕಾಶ್, ನಟರಾಜು, ವಿಜಯ್‌ಕುಮಾರ್, ನಾಗರಾಜು ಇದ್ದರು.

Latest Posts

ಲೈಫ್‌ಸ್ಟೈಲ್