ಚಾಮರಾಜನಗರ: ರಾಜ್ಯದಲ್ಲಿ ಕರೊನಾ ಸೋಂಕಿತರಿಗೆ ಅಗತ್ಯಕ್ಕೆ ತಕ್ಕಂತೆ ಬೆಡ್, ಐಸಿಯು, ಆಕ್ಸಿಜನ್ ಸಿಗದ ಪ್ರಕರಣಗಳು ಮುಂದುವರಿದಿದ್ದು, ಈಗಲೂ ಹಲವಾರು ರೋಗಿಗಳು ಮತ್ತು ಅವರ ಸಂಬಂಧಿಕರು ಅವುಗಳಿಲ್ಲದೆ ಪರದಾಡುತ್ತಿದ್ದಾರೆ. ಅಂಥವರ ಪೈಕಿ ಯುವಕನೊಬ್ಬ ತನ್ನ ತಾಯಿಗಾಗಿ ವೆಂಟಿಲೇಟರ್ ಕೊಡಿಸಿ ಎಂದು ಸಚಿವರಲ್ಲಿ ಕೈಮುಗಿದು ಬೇಡಿಕೊಂಡಿದ್ದಾನೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಕೃಷ್ಣ ಎಂಬ ಯುವಕ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರ ಬಳಿ ಹೀಗೆ ಕೈ ಮುಗಿದು ಬೇಡಿಕೊಂಡಿದ್ದಾನೆ. ಅಮ್ಮನನ್ನು ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಂಡಿದ್ದಾರೆ. ಅವರು ಬದುಕಬೇಕಿದ್ದರೆ ವೆಂಟಿಲೇಟರ್ ಅಗತ್ಯವಿದೆ, ಕೊಡಿಸಿ ಎಂಬುದಾಗಿ ಅಂಗಲಾಚಿ ಬೇಡಿಕೊಂಡಿದ್ದಾನೆ.
ಈ ಯುವಕನ ತಾಯಿ ಶಾಂತಮ್ಮಗೆ ಮೂರು ದಿನದ ಹಿಂದೆ ಕೋವಿಡ್ ದೃಢಪಟ್ಟಿದ್ದು, ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಂಡ್ಲುಪೇಟೆ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ, ಜಿಲ್ಲಾಸ್ಪತ್ರೆಯಿಂದ ಮತ್ತೆ ತಾಲೂಕಾಸ್ಪತ್ರೆಗೆ ಅಲೆಸಿದ್ದಾರೆ ಎಂದೂ ಶಾಂತಮ್ಮ ಕಡೆಯವರು ಆರೋಪಿಸಿದ್ದಾರೆ.
ಡಾಕ್ಟರ್ ಹತ್ತಿರ ಕೇಳಿದರೆ ಬೆಡ್ ಇದೆ, ವೆಂಟಿಲೇಟರ್ ಇಲ್ಲ ಎನ್ನುತ್ತಿದ್ದಾರೆ. ದಯಮಾಡಿ ವೆಂಟಿಲೇಟರ್ಗೆ ವ್ಯವಸ್ಥೆ ಮಾಡಿ. ನಾನು ಕಮಲಕ್ಕೆ ವೋಟ್ ಹಾಕಿರುವುದು, ವೋಟ್ ಕೇಳೋಕೆ ಮನೆ ಬಾಗಿಲಿಗೆ ಬಂದು ಕಾಲಿಗೆ ಬೀಳುತ್ತಾರೆ, ಸಾಯುತ್ತಿದ್ದರೆ ಯಾರು ಬಂದು ನೋಡುತ್ತಾರೆ ಎಂದು ಯುವಕ ಕೃಷ್ಣ ಗೋಳು ಹೇಳಿಕೊಂಡಿದ್ದಾನೆ. ಬಳಿಕ ಸಚಿವರು ಯುವಕನ ಫೋನ್ ನಂಬರ್ ಪಡೆದು ವೆಂಟಿಲೇಟರ್ ಕೊಡಿಸುವ ಭರವಸೆ ನೀಡಿದರು.
ಮದುವೆ ಆಗು ಎಂದು ಒತ್ತಾಯಿಸಿದ ಇಬ್ಬರಿಗೂ ಒಲ್ಲೆ ಎಂದಳು; ಎರಡು ಗುಂಡೇಟಿಗೆ ಹೆಣವಾಗಿ ಉರುಳಿದಳು..!
ಭಾರತಕ್ಕೆ ಕರೊನಾ ಮೂರನೇ ಅಲೆ ಪ್ರವೇಶ ಯಾವತ್ತು ಗೊತ್ತಾ?; ಇಲ್ಲಿದೆ ನೋಡಿ ಮಾಹಿತಿ…