More

    ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸೀಸ್ ಅವ್ಯವಸ್ಥೆಗೆ ರೋಗಿಗಳ ಪ್ರತಿಭಟನೆ

    ಉಡುಪಿ: ನಗರದ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಸೂಕ್ತ ರೀತಿಯಲ್ಲಿ ಡಯಾಲಿಸೀಸ್ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಪೆರ್ಡೂರು, ಜಿಲ್ಲಾಸ್ಪತ್ರೆಯಲ್ಲಿರುವ 10 ಡಯಾಲಿಸೀಸ್ ಯಂತ್ರದ ಪೈಕಿ ಆರು ಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆಯಿದ್ದು, ಒಂದು ವರ್ಷದಲ್ಲಿ 30ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ. 23 ಮಂದಿ ಬೇರೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಯಾಲಿಸಿಸ್ ಯಂತ್ರಕ್ಕೆ ಕಳಪೆಮಟ್ಟದ ಕೆಮಿಕಲ್ ಹಾಕಿದ್ದರಿಂದ ಮಿಶನ್ ಕೆಲಸ ಮಾಡುತ್ತಿಲ್ಲ. ಎಸಿ ಇಲ್ಲದೆ ಕಿಟಕಿಯಿಂದ ಧೂಳು ಬರುತ್ತಿದೆ. ಸೂಕ್ತ ಚುಚ್ಚುಮದ್ದು, ತಜ್ಞ ಸಿಬ್ಬಂದಿ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪತ್ರಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಡಯಾಲಿಸಿಸ್ ಘಟಕ ಪರಿಶೀಲನೆ ಮಾಡಿದ್ದೇನೆ. ಸಂಜೀವಿನಿ ಸಂಸ್ಥೆ ರಾಜ್ಯದ 122 ಕಡೆಗಳಲ್ಲಿ ಡಯಾಲಿಸಿಸ್ ಕೆಲಸದ ಗುತ್ತಿಗೆ ಪಡೆದ ಬಳಿಕ ಸಮಸ್ಯೆ ಉಂಟಾಗಿದೆ. ಜಿಲ್ಲಾ ಸರ್ಜನ್ ಅವರೊಂದಿಗೆ ಸಭೆ ನಡೆಸಿದ್ದೇನೆ. ಮೇಲ್ನೋಟಕ್ಕೆ ಸಂಜೀವಿನಿ ಸಂಸ್ಥೆಯ ಲೋಪ ಎದ್ದು ಕಾಣುತ್ತದೆ. ಬಡ ರೋಗಿಗಳ ಹಿತ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ಹಣಕಾಸಿನ ಕೊರತೆ ಇದ್ದರೆ ತಕ್ಷಣದಲ್ಲಿ ಖಾಸಗಿ ಸಹಭಾಗಿತ್ವದ ಮೂಲಕ ಔಷಧಿಗಳನ್ನು ಖರೀದಿಸುವ ವ್ಯವಸ್ಥೆ ಮಾಡಲಾಗುವುದು. ಸಂಜೀವಿನಿ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ವಿನಂತಿಸಿದ್ದೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts