ಬೇಲೂರು: ಕ್ಷಯ ರೋಗಿಗಳಿಗೆ ನಿಮ್ಮ ಜತೆ ನಾವಿದ್ದೇವೆ ಎಂಬ ಸಂದೇಶ ಸಾರುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರೆ, ರೋಗಿಗಳು ಗುಣಮುಖರಾಗಲು ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ಹೇಳಿದರು.
ತಾಲೂಕಿನ ಅರೇಹಳ್ಳಿ ಸಮುದಾಯ ಕೇಂದ್ರದಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಕ್ಷಯ ರೋಗಿಗಳಿಗೆ ಫುಡ್‌ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶವಿರುವ ಫುಡ್‌ಕಿಟ್‌ಗಳನ್ನು ನೀಡಿದಾಗ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜತೆಗೆ ಮುಂದಾಗುವ ತೊಂದರೆ ಸಾಧ್ಯವಾದಷ್ಟು ಕಡಿಮೆ ಮಾಡಬಹುದು. ಕ್ಷಯ ರೋಗಿಗಳನ್ನು ಗಮನದಲ್ಲಿ ಇಟ್ಟುಕೊಂಡು ಎರಡು ವರ್ಷಗಳಿಂದ ಫುಡ್‌ಕಿಟ್‌ಗಳನ್ನು ನೀಡುತ್ತಿರುವ ಹಾಗೂ ಚಿಕಿತ್ಸೆ ನೀಡಲು ದೂರದ ಗ್ರಾಮಗಳಿಗೆ ತೆರಳುವ ಸಂದರ್ಭ ವಾಹನ ಸೌಲಭ್ಯ ಒದಗಿಸುತ್ತಿರುವ ಅರೇಹಳ್ಳಿ ರೋಟರಿ ಸಂಸ್ಥೆ ಸದಸ್ಯರ ಸೇವೆ ಶ್ಲಾಘನೀಯ ಎಂದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ಚೇತನ್ ಪ್ರಕಾಶ್ ಮಾತನಾಡಿದರು. ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞೆ ಡಾ.ಅನುಪಮಾ, ರೋಟರಿ ಸಂಸ್ಥೆ ಅಧ್ಯಕ್ಷ ಕಾರ್ತಿಕ್, ಕೆ.ಆರ್, ಸದಸ್ಯರಾದ ಕಿಶೋರ್, ಬಿ.ಪಿ.ಹರೀಶ್, ಡಬ್ಲ್ಯು.ಆರ್.ಪಿಂಟೋ, ಸಿ.ನವೀನ್, ಪೃಥ್ವಿ, ಬಿ.ಎಂ.ಶರತ್ ಇತರರು ಇದ್ದರು.