More

    ಬೆಳಗಾವಿ: ಸಹನಶೀಲತೆ ಹಿಂದು ಧರ್ಮದ ಭಾಷೆ

    ಬೆಳಗಾವಿ: ಶತಮಾನಗಳ ಇತಿಹಾಸ ಹೊಂದಿರುವ ಹಿಂದು ಧರ್ಮಕ್ಕೆ ನಿಖರವಾದ ಭಾಷೆಯಿಲ್ಲ. ಹಿಂದುಗಳಲ್ಲಿ ಇರುವ ಅಧ್ಯಾತ್ಮ, ಸಹನಶೀಲತೆಯೇ ಹಿಂದು ಧರ್ಮದ ಭಾಷೆಯಾಗಿದೆ ಎಂದು ನ್ಯಾಯವಾದಿ ಮೋಹನ ಮಾವಿನಕಟ್ಟಿ ಹೇಳಿದರು.

    ನಗರದ ಛತ್ರಿವಾಡಾ ಸಭಾ ಭವನದಲ್ಲಿ ಶನಿವಾರ ಹಿಂದು ಜನಜಾಗೃತಿ ಸಮಿತಿಯಿಂದ ಹಮ್ಮಿಕೊಂಡಿದ್ದ ಹಿಂದು ರಾಷ್ಟ್ರ ಸಮಾವೇಶದಲ್ಲಿ ಮಾತನಾಡಿ, ಜಗತ್ತಿನಲ್ಲಿಯೇ ಹಿಂದು ಧರ್ಮ ಶ್ರೇಷ್ಠವಾದ ಧರ್ಮವಾಗಿದೆ. ಈ ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾಷಾ ವ್ಯಾಮೋಹ ಹಿಂದುಗಳಲ್ಲಿ ಬಿರುಕು ಮೂಡಿಸುತ್ತಿದೆ. ಧರ್ಮದ ವಿಷಯ ಬಂದಾಗ ಮರಾಠಿ, ಕನ್ನಡಿಗರು ಒಂದಾಗುತ್ತಾರೆ. ಅದೇ ಭಾಷೆ ವಿಷಯ ಬಂದಾಗ ಒಬ್ಬರನ್ನೊಬ್ಬರು ವಿರೋಧಿಸುತ್ತಾರೆ. ಇದು ದುರ್ದೈವದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಹಿಂದು ಜನ ಜಾಗೃತಿ ಸಮಿತಿ ಸದಸ್ಯ ಋಷಿಕೇಶ ಗುರ್ಜರ ಮಾತನಾಡಿ, ಬಾಂಗ್ಲಾದೇಶದ ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಬೆಳಗಾವಿಗೆ ಸೇರಿ ದೇಶದ ವಿವಿಧೆಡೆ ನೆಲೆಸಿದ್ದಾರೆ. ಅಂತವರನ್ನು ದೇಶದಿಂದ ಹೊರ ಹಾಕಲು ಸಿಎಎ,
    ಎನ್‌ಆರ್‌ಸಿ ಕಾಯ್ದೆ ಸಹಕಾರಿಯಾಗಲಿದೆ. ಈ ಕಾಯ್ದೆಗೆ ವಿರೋಧ ಮಾಡುವುದು ಸರಿಯಲ್ಲ. ದೇಶದ ಅಭಿವೃದ್ಧಿಗೆ ಈ ಕಾನೂನು ಅವಶ್ಯವಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts