More

    ಪಾಸ್​ಪೋರ್ಟ್​ ಅರ್ಜಿಯಲ್ಲಿ ಕ್ರಿಮಿನಲ್​ ಪ್ರಕರಣಗಳ ವಿವರ ನೀಡದ್ದಕ್ಕೆ ಮೇಧಾ ಪಾಟ್ಕರ್​ ವಿಚಾರಣೆಗೆ ಅನುಮತಿ ಕೋರಿ ಸಚಿವಾಲಯಕ್ಕೆ ಪತ್ರ

    ನವದೆಹಲಿ: ಪಾಸ್​ಪೋರ್ಟ್​ ಅರ್ಜಿಯಲ್ಲಿ ತಮ್ಮ ಮೇಲಿರುವ ಕ್ರಿಮಿನಲ್​ ಪ್ರಕರಣಗಳ ಬಗ್ಗೆ ಮರೆ ಮಾಚಿದ್ದಕ್ಕೆ ನರ್ಮದಾ ಉಳಿಸಿ ಆಂದೋಲನದ ಮೇಧಾ ಪಾಟ್ಕರ್​ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ಮುಂಬೈ ಪಾಸ್​ಪೋರ್ಟ್​ ಕಚೇರಿ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ.

    2019ರ ಜೂನ್​ನಲ್ಲಿ ಈ ಬಗ್ಗೆ ಮೇಧಾ ವಿರುದ್ಧ ಪತ್ರಕರ್ತರೊಬ್ಬರು ದೂರು ದಾಖಲಿಸಿದ್ದರು. ಅದರಲ್ಲಿ ಕ್ರಿಮಿನಲ್​ ದೂರುಗಳ ಸಂಗತಿಗಳನ್ನು ಮರೆ ಮಾಚಿ ಪಾಸ್​ಪೋರ್ಟ್​ ಪಡೆದಿದ್ದಾರೆ ಎಂದು ಆರೋಪಿಸಿದ್ದರು.

    ಆ ದೂರಿನಲ್ಲಿ ಮೇಧಾ ಪಾಟ್ಕರ್​ ವಿರುದ್ಧ 9 ಕ್ರಿಮಿನಲ್​ ಪ್ರಕರಣಗಳಿರುವ ಬಗ್ಗೆ ಸಾಕ್ಷಿಗಳನ್ನು ನೀಡಲಾಗಿತ್ತು. ಈ ಎಲ್ಲ ಪ್ರಕರಣಗಳು ಮಧ್ಯಪ್ರದೇಶದಲ್ಲಿ ದಾಖಲಾಗಿದ್ದು ವಿಚಾರಣೆಗೆ ಬಾಕಿ ಇವೆ ಎಂದು ತಿಳಿಸಲಾಗಿತ್ತು.

    2017ರ ಮಾರ್ಚ್​ 30ರಂದು ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಮೇಧಾ ಪಾಟ್ಕರ್​, ತನ್ನ ವಿರುದ್ಧ ಯಾವ ಕ್ರಿಮಿನಲ್​ ಪ್ರಕರಣಗಳು ಇಲ್ಲ ಎಂದು ಅರ್ಜಿಯಲ್ಲಿ ಭರ್ತಿ ಮಾಡಿದ್ದರು. ಕ್ರಿಮಿನಲ್​ ದೂರಿನ ಕಾಲಂನಲ್ಲಿ ನನ್​ (ಇಲ್ಲ) ಎಂದು ದಾಖಲಿಸಿದ್ದರು.

    ಮುಂಬೈ ಪ್ರಾದೇಶಿಕ ಪಾಸ್​ಪೋರ್ಟ್​ ಕಚೇರಿ ಮಧ್ಯಪ್ರದೇಶದ ಪೊಲೀಸ್​ ಮಹಾ ನಿರ್ದೇಶಕರಿಗೂ ಈ ಬಗ್ಗೆ ಪತ್ರ ಬರೆದಿತ್ತು. ಆಗ ಡಿಜಿಪಿ ಮೇಧಾ ಅವರ ವಿರುದ್ಧ ಐದು ಕ್ರಿಮಿನಲ್​ ಪ್ರಕರಣಗಳಿರುವ ಬಗ್ಗೆ ಮಾಹಿತಿ ನೀಡಿದ್ದರು.

    ಇದರಿಂದ ಪಾಸ್​ಪೋರ್ಟ್​ ಕಚೇರಿ ಮೇಧಾ ಅವರಿಗೆ ಅಕ್ಟೋಬರ್​ 18ರಂದು ನೋಟಿಸ್​ ಜಾರಿಗೊಳಿಸಿತ್ತು. ಅದಕ್ಕೆ ಅವರು 10 ದಿನಗೊಳಗಾಗಿ ಉತ್ತರ ನೀಡಲು ತಿಳಿಸಲಾಗಿತ್ತು. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts