More

    ಪ್ರಯಾಣಿಕರ ಮಾಹಿತಿ ಕೇಳಿದ ಸರ್ಕಾರ

    ಚಿತ್ರದುರ್ಗ: ಸಾರಿಗೆ ಸಂಸ್ಥೆಗಳಿಂದ ನಿತ್ಯ ಸಂಚರಿಸುವ ಎಲ್ಲ ಪ್ರಯಾಣಿಕರ ಮಾಹಿತಿ ತರಿಸಿಕೊಳ್ಳುವ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ಈಡೇರಿಕೆಗೆ ಬೇಕಾಗುವ ಮೊತ್ತದ ಲೆಕ್ಕಾಚಾರಕ್ಕೆ ಸರ್ಕಾರ ಮುಂದಾಗಿದೆ.

    ಸದ್ಯಕ್ಕಂತೂ ಸಾರಿಗೆ ಸಂಸ್ಥೆಗಳ ಬಸ್‌ಗಳ ಪ್ರಯಾಣ ದರ ಹೆಚ್ಚಳದ ಪ್ರಸ್ತಾಪವಿಲ್ಲ ಎನ್ನಲಾಗುತ್ತಿದ್ದು, ಕೆಎಸ್‌ಆರ್‌ಟಿಸಿ, ಎನ್‌ಡಬ್ಲುೃಕೆ ಆರ್‌ಟಿಸಿ, ಕೆಕೆಆರ್‌ಟಿಸಿ ಬಸ್‌ಗಳಲ್ಲಿ ನಿತ್ಯವೂ ಸಂಚರಿಸುವ ಎಲ್ಲ ಪ್ರಯಾಣಿಕರ ಮಾಹಿತಿಯನ್ನು ಕೇಳಿದೆ ಎನ್ನಲಾಗಿದೆ.

    ಚಿತ್ರದುರ್ಗ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲೇ ನಿತ್ಯ ಸರಾಸರಿ ಒಂದು ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ ಎಂಬ ಮಾಹಿತಿ ಇದೆ.
    ನಿತ್ಯ ಅಂದಾಜು 40 ಲಕ್ಷ ರೂ. ಆದಾಯ

    ಈ ವಿಭಾಗದ ವ್ಯಾಪ್ತಿಯಲ್ಲಿ ನಿತ್ಯ ಅಂದಾಜು 40 ಲಕ್ಷ ರೂ. ಆದಾಯ ಸಂಗ್ರಹವಾಗುತ್ತದೆ. ಸದ್ಯಕಂತೂ ಗ್ಯಾರಂಟಿ ಕುರಿತಂತೆ ಸಾರಿಗೆ ನಿಗಮಕ್ಕೆ ಯಾವುದೇ ಆದೇಶ ಬಂದಿಲ್ಲವೆನ್ನುತ್ತಾರೆ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಯೊಬ್ಬರು.

    ಚಿತ್ರದುರ್ಗ ವಿಭಾಗೀಯ ಕಚೇರಿ ವ್ಯಾಪ್ತಿಯ ಪಾವಗಡ, ಚಿತ್ರದುರ್ಗ, ಹೊಸದುರ್ಗ ಹಾಗೂ ಚಳ್ಳಕೆರೆ ಡಿಪೋಗಳಿಂದ 309 ಬಸ್‌ಗಳಿದ್ದು, 291 ಷೆಡ್ಯೂಲ್‌ಗಳಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಇವುಗಳ ಸಂಚರಿಸುತ್ತಿವೆ.

    ಹಿರಿಯೂರು, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ಡಿಪೋ ನಿರ್ಮಾಣ ಕಾರ್ಯ ನಡೆದಿದೆ.

    ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗಿದೆ. ಸೋಮವಾರದಿಂದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದ ಜನರಿಗೆ ನೀಡಿರುವ ಆಶ್ವಾಸನೆಯಂತೆ ಹಂತ, ಹಂತವಾಗಿ ಗ್ಯಾರಂಟಿಗಳನ್ನು ಈಡೇರಿಸಲಿದ್ದಾರೆ. ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸುವ ವಿಚಾರ ನನ್ನ ಗಮನಕ್ಕಂತೂ ಬಂದಿಲ್ಲ. ವರಸೆ ಬದಲಾಯಿಸುವ ಪ್ರಶ್ನೆಯೇ ಇಲ್ಲ. ಆದೇಶ ಬಂದಾಗ ತಿಳಿಯಲಿದೆ.
    ಕೆ.ಸಿ.ವೀರೇಂದ್ರ ಪಪ್ಪಿ, ಶಾಸಕ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts