More

  ಪಾಶ ಕಿರುಚಿತ್ರಕ್ಕೆ ಅಂತಾರಾಷ್ಟಿಯ ಪ್ರಶಸ್ತಿ

  ಕಲಬುರಗಿ: ಗಧಾಗ್ರಜ ಫಿಲಂಸ್‌ನಡಿ ನಿರ್ಮಾಣವಾದ ಕಲಬುರಗಿ ಜಿಲ್ಲೆ ತಂಡದ ಪಾಶ' ಕಿರುಚಿತ್ರ ಎಂಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸಾಹಿತಿ ಜೋಗಿ ಅವರ ಲೈಫ್ ಈಸ್ ಬ್ಯೂಟಿಫುಲ್ ಕೃತಿ ಆಧಾರಿತ ಕಥೆ ಲಕ್ಷಿö್ಮÃಕಾಂತ ಜೋಶಿ ನಿರ್ದೇಶನದಲ್ಲಿ ಕಿರುಚಿತ್ರ ಮೂಡಿ ಬಂದಿದೆ. ಬೆAಗಳೂರಿನ ವಿಡಿಯೋಟೇಪ್ ಫಿಲ್ಮ್ ಫೆಸ್ಟಿವಲ್‌ನಲ್ಲಿಉತ್ತಮ ಸಾಮಾಜಿಕ ಸಂದೇಶ’ ವಿಭಾಗದ ಪ್ರಶಸ್ತಿ, ಕೋಲ್ಕತದ ಪ್ರತಿಷ್ಠಿತ ಅಂತಾರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಉತ್ತಮ ಕನ್ನಡ ಕಿರುಚಿತ್ರ ಪ್ರಶಸ್ತಿ, ಮುಂಬೈನ ಜಾಶ್ನೆ ಚಲನಚಿತ್ರೋತ್ಸವದಲ್ಲಿ ಉತ್ತಮ ಕಿರುಚಿತ್ರ, ಮಹಾರಾಷ್ಟçದ ರೀಲ್ಸ್ ಅಂತಾರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಉತ್ತಮ ಕಥೆ ಪ್ರಶಸ್ತಿ, ಐಕಾನಿಕ್ ಶಾರ್ಟ್ ಸಿನಿ ಅವಾರ್ಡ್ಸ್ನಲ್ಲಿ ಉತ್ತಮ ಕಥೆ, ಉತ್ತಮ ಪ್ರಾಯೋಗಿಕ ಚಿತ್ರ, ಉತ್ತಮ ಕನ್ನಡ ಕಿರುಚಿತ್ರ ವಿಭಾಗದಲ್ಲಿ ಮನ್ನಣೆ ಪಡೆದಿದೆ.
  ಮುಖ್ಯ ಪಾತ್ರದಲ್ಲಿ ಕಿರುತೆರೆ ಹಿರಿಯ ನಟ ವಿಜಯ ಕುಲಕರ್ಣಿ ನಟಿಸಿದ್ದು, ಸೋಮಶಂಕರ ಬಿರಾದಾರ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ. ರಂಗಾಯಣ ಕಲಾವಿದರಾದ ಉಮೇಶ ಪಾಟೀಲ್, ಶ್ರೀನಿವಾಸ ದೋರನಳ್ಳಿ, ಕೌಶಿಕ್ ಕುಲಕರ್ಣಿ, ಪ್ರದೀಪ ಬೆಳಮಗಿ, ರಿಷಿಕೇಶ ಕುಲಕರ್ಣಿ, ನೀಲಾಂಬಿಕಾ, ಲಕ್ಷಿö್ಮÃ ಅಥಣಿ ತಾರಾಗಣದಲ್ಲಿz್ದÁರೆ. ಸ್ಫೂರ್ತಿ ಅಥಣಿ, ಸ್ನೇಹಾ, ಕಾವ್ಯ, ವೈಷ್ಣವಿ ಬಾಲ ಕಲಾವಿದರಾಗಿ ಅಭಿನಯಿಸಿz್ದÁರೆ.
  ಸೋಮಶಂಕರ ಬಿರಾದಾರ ಸಹ ನಿರ್ದೇಶಕ, ಅಂಬರೀಶ ಮರಾಠಾ ಸಹಾಯಕ ನಿರ್ದೇಶಕ, ಛಾಯಾಗ್ರಾಹಕರಾಗಿ ರಾಘು ಮರೆನೂರ, ಸಂಕಲನ ಓಂಕಾರ ಮತ್ತು ಭಾಗೇಶ ಪಾಟೀಲ್ ಜಂಟಿಯಾಗಿ ಕಾರ್ಯನಿರ್ವಹಿಸಿz್ದÁರೆ. ಸಚಿನ್ ಶರ್ಮಾ ಸಂಗೀತ ನಿರ್ದೇಶನ ನೀಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts