More

  ಪಕ್ಷ ನೀಡಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ

  ಅಥಣಿ: ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ವರಿಷ್ಠರು ಜಿಲ್ಲಾ ಮಾಧ್ಯಮ ವಕ್ತಾರನಾಗಿ ನೇಮಿಸಿದ್ದು, ನೀಡಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ರಾವಸಾಬ ಐಹೊಳೆ ಹೇಳಿದರು.

  ಪಟ್ಟಣದಲ್ಲಿ ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸ್ಥಳೀಯ ಪತ್ರಕರ್ತರ ಸಂಘದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿದರು.

  ಪತ್ರಕರ್ತರಾದ ಸಿ.ಎ.ಇಟ್ನಾಳಮಠ, ರಾಜು ಗಾಲಿ, ಶೇಖರ ತೆವರೆಟ್ಟಿ, ಶಿವು ಅಪರಾಜ, ಪರಶುರಾಮ ನಂದೇಶ್ವರ, ರಮೇಶ ಬಾದವಾಡಗಿ, ರಾಕೇಶ ಮೈಗೂರ, ವಿಜಯಕುಮಾರ ಅಡಹಳಿ, ಪ್ರಕಾಶ ಕಾಂಬಳೆ, ಸುಭಾಷ ಕಾಂಬಳೆ, ದೀಪಕ ಸಿಂಧೆ, ರಾಜು ವಾಘಮೋರೆ, ವೆಂಕಟೇಶ ದೇಶಪಾಂಡೆ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts