More

  ಪಕ್ಷದ ಶುದ್ಧೀಕರಣ ಚುನಾವಣೆಗೆ ಮಾತ್ರ ಸೀಮಿತವಲ್ಲ

  ಶಿವಮೊಗ್ಗ: ಪಕ್ಷದ ಶುದ್ಧೀಕರಣ ಎಂಬುದು ಕೇವಲ ಚುನಾವಣೆ ಸಂದರ್ಭದಲ್ಲಿ ಮಾಡುವುದಲ್ಲ. ಎಲ್ಲ ಕಾಲಕ್ಕೂ ಅದನ್ನು ಮಾಡಬೇಕಿದೆ. ಶುದ್ಧೀಕರಣ ಆಗಬೇಕಿರುವುದು ಬಿಜೆಪಿ ಮಾತ್ರವಲ್ಲ, ಇಡೀ ವ್ಯವಸ್ಥೆಯೇ ಶುದ್ಧೀಕರಣ ಆಗಬೇಕು ಎಂದು ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ ತಿಳಿಸಿದರು.

  ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮತ್ತು ತಮಗೆ ಟಿಕೆಟ್ ನೀಡದ್ದಕ್ಕೆ ಸಂಸದ ಡಿ.ವಿ.ಸದಾನಂದ ಗೌಡ ಅವರು ಇದೀಗ ಶುದ್ಧೀಕರಣದ ಬಗ್ಗೆ ಧ್ವನಿ ಎತ್ತಿದ್ದಾರೆ. ಚುನಾವಣೆ ಎಂಬುದು ಯುದ್ಧವಿದ್ದಂತೆ. ಹೀಗಿರುವಾಗ ಶುದ್ಧೀಕರಣದ ಮಾತು ಎಲ್ಲ ಕಾಲಕ್ಕೂ ಅನ್ವಯವಾಗಬೇಕಿದೆ. ಆದರೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ಶುದ್ಧೀಕರಣ ಮಾಡಬೇಕೆನ್ನುವುದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
  ಚುನಾವಣಾ ಸಂದರ್ಭದಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ರಾಜಕೀಯ ಪಕ್ಷಗಳಲ್ಲಿ ಬಂಡಾಯ ಸಾಮಾನ್ಯ. ಶಿವಮೊಗ್ಗ ಸೇರಿ ಹಲವೆಡೆ ಎದ್ದಿರುವ ಬಂಡಾಯವನ್ನು ಬಿಜೆಪಿ ಯಶಸ್ವಿಯಾಗಿ ನಿಭಾಯಿಸುತ್ತದೆ. ಪುತ್ರನಿಗೆ ಹಾವೇರಿಯಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಸ್ಪರ್ಧಿಸುವುದಾಗಿ ಈಶ್ವರಪ್ಪ ಹೇಳಿದ್ದು, ಅವರ ನಿರ್ಧಾರವನ್ನು ಕೇಂದ್ರದ ನಾಯಕರು ಗಮನಿಸಿದ್ದಾರೆ. ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಒಂದು ವೇಳೆ ಕಾಂತೇಶ್‌ಗೆ ಹಾವೇರಿ ಟಿಕೆಟ್ ಸಿಕ್ಕಿದ್ದರೆ ಈಶ್ವರಪ್ಪ ಬಂಡಾಯ ಇರುತ್ತಿತ್ತಾ? ಶುದ್ಧೀಕರಣದ ಪ್ರಶ್ನೆ ಏಳುತ್ತಿತ್ತಾ ಎಂದು ಪ್ರಶ್ನಿಸಿದರು.
  ಮಾಧ್ಯಮ ಪ್ರಮುಖ್ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts