ಹುಬ್ಬಳ್ಳಿ : ಅರಸಿಕೆರೆ ನಿಲ್ದಾಣದಲ್ಲಿ ಡಿ. 14ರಂದು ಸುರಕ್ಷತೆ ಮತ್ತು ನಿರ್ವಹಣೆ ಕಾರ್ಯ ಕೈಗೊಳ್ಳಲಿರುವುದರಿಂದ ವಿವಿಧ ರೈಲುಗಳ ಸಂಚಾರ ಭಾಗಶಃ ರದ್ದುಗೊಳ್ಳಲಿವೆ.
ಎಸ್ಎಸ್ಎಸ್ ಹುಬ್ಬಳ್ಳಿ – ಅರಸಿಕೆರೆ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರ ಡಿ. 14ರಂದು ಭಾಗಶಃ ರದ್ದಾಗಿದ್ದು, ಈ ರೈಲು ಬಿರೂರವರೆಗೆ ಮಾತ್ರ ಸಂಚರಿಸಲಿದೆ. ಅರಸಿಕೆರೆ- ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರ ಡಿ. 15ರಂದು ಭಾಗಶಃ ರದ್ದಾಗಿದ್ದು, ಈ ರೈಲು ಬಿರೂರಿನಿಂದ ಸಂಚಾರ ಪ್ರಾರಂಭಿಸಲಿದೆ.