ವಿಜಯಪುರ: ಸನಾತನ ಸಂಸತಿ ಉಳಿಸಿ ಬೆಳೆಸುವುದರೊಂದಿಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಳ್ಳುವ ದತ್ತಿಗೋಷ್ಠಿಗಳು ಪೂರಕ ಎಂದು ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು ನುಡಿಯ ಸೇವೆಯನ್ನು ಸಾಹಿತ್ಯ ಪರಿಷತ್ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಕಸಾಪದಿಂದ ಕನ್ನಡ ನಾಡಿನ ಕೀರ್ತಿ ಹೆಚ್ಚುತ್ತಿದೆ ಎಂದರು.
ಸಾಹಿತಿ ಶಿಲ್ಪಾ ಭಸ್ಮೆ ಬಸವಾದಿ ಶರಣರು ಮನುಕುಲಕ್ಕೆ ನೀಡಿದ ಕೊಡುಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಬಸವಾದಿ ಶರಣರ ಹಲವು ವಚನಗಳ ಸಾರವನ್ನು ಅಥೈಸುವ ಮೂಲಕ ದಯೆ, ಧರ್ಮ, ಆಚಾರ, ನಡೆ&ನುಡಿ, ಕಾಯಕ ಮತ್ತು ದಾಸೋಹ ಸಿದ್ಧಾಂತದ ಕುರಿತು ವಿವರಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ವಿ.ಎಂ. ಬಾಗಾಯತ ಕಲ್ಯಾಣದ ಅನುಭವ ಮಂಟಪ ವಿಷಯದ ಕುರಿತು ಉಪನ್ಯಾಸ ನೀಡಿ, ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪ. ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಬಸವಕಲ್ಯಾಣದ ಅನುಭವ ಮಂಟಪದಲ್ಲಿದ್ದ ಎಲ್ಲ ಶರಣ&ಶರಣೆಯರಿಗೆ ನೀಡಿದ ಅಭಿವ್ಯಕ್ತಿ ಸ್ವಾತಂತ್ರವನ್ನು ನಾವು ಸ್ಮರಿಸಲೇಬೇಕು ಎಂದರು.
ಮುಖ್ಯ ಅತಿಥಿ ಡಾ.ಎಂ.ಎಸ್. ಸಿರಗುಪ್ಪಿ, ಸಿದ್ರಾಮಪ್ಪ ತೋಟದ, ಎಸ್.ಆರ್. ಜೀರಗಾಳ, ಶಂಕರಗೌಡ ಪಾಟೀಲ, ಪ್ರಕಾಶ ಮಲ್ಲಾರಿ ವೇದಿಕೆಯಲ್ಲಿದ್ದರು. ಸಿಂದಗಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂದ ನಿರ್ದೇಶಕರಾಗಿ ಆಯ್ಕೆಯಾದ ಸಂತೋಷ ಅಮರಗೊಂಡ ಅವರನ್ನು ಸನ್ಮಾನಿಸಲಾಯಿತು.
ಡಾ. ಸಂಗಮೇಶ ಮೇತ್ರಿ ಸ್ವಾಗತಿಸಿ ಗೌರವಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರವೀನ ಶೇಖ ನಿರೂಪಿಸಿದರು. ಸಿದ್ರಾಮಯ್ಯ ಲಕ್ಕುಂಡಿಮಠ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿಷೇಕ ಚಕ್ರವರ್ತಿ, ರಾಜೇಸಾಬ ಶಿವನಗುತ್ತಿ, ಸಿದ್ರಾಮಪ್ಪ ಜಂಗಮಶೆಟ್ಟಿ, ಕೆ.ಎಸ್. ಹಣಮಾಣಿ, ಎಂ.ಎಸ್. ಕಾಂಬಳೆ, ಎಫ್.ಎ. ಹಿರೇ ಕೊಪ್ಪ, ಯುವರಾಜ್ ಚೋಳಕೆ, ಜಿ.ಎಸ್. ಬಳ್ಳೂರ, ಎಂ.ಎಸ್. ಬಗಲಿ, ಅರ್ಜುನ ಶಿರೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಸೂರ್ಯಕಾಂತ ಸಾಲೋಟಗಿ, ಅಹ್ಮದ ವಾಲೀಕಾರ, ಸಿದ್ದು ಮೇಲಿನಮನಿ, ಸಿದ್ದು ಮೇಲಿನಮನಿ, ಆಶಾ ಬಿರಾದಾರ, ವೈ.ಎಚ್. ಲಂಬು, ಎಂ.ಟಿ. ವಾಲೀಕಾರ, ಶ್ರೀಕಾಂತ ನಾಡಗೌಡ, ಮಂಜುನಾಥ ತೋಟದ, ಶಿವಾಜಿ ಮೋರೆ, ಅನುಷಾ ಹಣಮಾಣಿ, ಲಕ್ಷಿ$್ಮ ಬಿರಾದಾರ, ಸನ್ನಿಧಿ ಬಿರಾದಾರ, ಸಹನಾ ಬಿರಾದಾರ ಮತ್ತಿತರರಿದ್ದರು.