More

  ಮಾಣಿ ಮೈಸೂರು ಹೆದ್ದಾರಿಯ ಪರ್ಲಡ್ಕದಲ್ಲಿ ವಾಹನಗಳ ನಡುವೆ ಅಪಘಾತ – ಸಂಚಾರ ಅಸ್ಥವ್ಯಸ್ಥ

  ಪುತ್ತೂರು: ಪರ್ಲಡ್ಕ ಜಂಕ್ಷನ್ ನಲ್ಲಿ ರಿಕ್ಷಾವನ್ನು ಹಿಂದಿಕ್ಕಲು ಹೋದ ದ್ವಿಚಕ್ರ ವಾಹನವೊಂದು ಸಾಗಾಟ ವಾಹನವೊಂದಕ್ಕೆ ಡಿಕ್ಕಿಯಾಗಿ ದ್ವಿಚಕ್ರವಾಹನ ಛಿದ್ರವಾಗಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾರೆ.

  ಮಾಣಿ ಮೈಸೂರು ಹೆದ್ದಾರಿಯ ಪರ್ಲಡ್ಕದಲ್ಲಿ ವಾಹನಗಳ ನಡುವೆ ಅಪಘಾತ - ಸಂಚಾರ ಅಸ್ಥವ್ಯಸ್ಥ

  ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿ ಹೋದ ನಿಸಾನ್ ಕಾರಿಗೆ ಪೊಲೀಸರು ಲಾಕ್ ಹಾಕಿದ್ದು, ಇದನ್ನು ತಪ್ಪಿಸಲು ರಿಕ್ಷಾ ಹೋಗಿದ್ದು, ಈ ಸಂದರ್ಭ ಹಿಂಭಾಗದಿಂದ ಬರುತ್ತಿದ್ದ ದ್ವಿಚಕ್ರವಾಹನ ರಸ್ತೆಯ ಬಲ ಬದಿಗೆ ಬಂದಿದೆ. ಇದರಿಂದ ಮಡಿಕೇರಿ ಭಾಗದಿಂದ ಬರುತ್ತಿದ್ದ ಮಿನಿ ಪಿಕಪ್ ಗೆ ಡಿಕ್ಕಿಯಾಗಿದೆ.

  ಮಾಣಿ ಮೈಸೂರು ಹೆದ್ದಾರಿಯ ಪರ್ಲಡ್ಕದಲ್ಲಿ ವಾಹನಗಳ ನಡುವೆ ಅಪಘಾತ - ಸಂಚಾರ ಅಸ್ಥವ್ಯಸ್ಥ

  ಹೆದ್ದಾರಿಯಲ್ಲಿ ಅರ್ಧ ತಾಸಿಗೂ ಹೆಚ್ಚು ಸಮಯದಿಂದ ವಾಹನ ಸಂಚಾರ ಬಂದ್ ಆಗಿದ್ದು, ಕೇಳುವವರೇ ಇಲ್ಲದಂತಾಗಿದೆ. ವಾಹನಗಳು ಸಾಲುಗಟ್ಟಿನಿಂತಿದ್ದು, ಈ ಬಗ್ಗೆ ದೂರುಗಳು ಹೋದರೂ ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳದಿಂದ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts