More

    ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲಿ

    ಬೋರಗಾಂವ: ನಮ್ಮ ಮಕ್ಕಳು ದೇಶದ ಉತ್ತಮ ಪ್ರಜೆಯಾಗಲು ಮೊದಲು ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಹೇಳಿದ್ದಾರೆ.
    ಪಟ್ಟಣದ ಬೋರಗಾಂವ ಶಿಕ್ಷಣ ಸಂಘದ ರಜತ ಮಹೋತ್ಸವ ಅಂಗವಾಗಿ ಕೆ.ಎಸ್. ಪಾಟೀಲ ಪ್ರೌಢಶಾಲೆ, ಎ.ಬಿ. ಪಾಟೀಲ ಪ್ರಾಥಮಿಕ ಶಾಲೆ ಹಾಗೂ ಹಂಸವಾಹಿಣಿ ಮಹಿಳಾ ಮಂಡಳ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರು ಮಕ್ಕಳಿಗೆ ವಿದ್ಯಾರೂಪದ ಧನ, ಸಂಸ್ಕಾರ ರೂಪದ ಧನ, ಧೈರ್ಯ ರೂಪದ ಧನ ಹಾಗೂ ಧರ್ಮ ರೂಪದ ಧನ ನೀಡಿ ಬೆಳೆಸಿದರೆ ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಲಿದೆ ಎಂದರು. ಮಕ್ಕಳಿಗೆ ವಿನಯತೆ, ಪ್ರಾಮಾಣಿಕತೆಯಿಂದ ಬದಕುವುದನ್ನು ಕಲಿಸಬೇಕು ಎಂದರು.

    ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಉತ್ತಮ ನಾಗರಿಕನಾಗಲು ಶಿಕ್ಷಣ ಸಂಘದ ವತಿಯಿಂದ ಪ್ರತಿ ವರ್ಷ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.

    ಹಿರಿಯರಾದ ಮೀನಾಕ್ಷಿ ಪಾಟೀಲ, ಸಂಘದ ಅಧ್ಯಕ್ಷ ನೇಮಗೊಂಡಾ ಪಾಟೀಲ, ಆರ್.ಬಿ. ಪಾಟೀಲ, ನಿರ್ದೇಶಕರಾದ ಶಾಂತಿನಾಥ ಲಗಾರೆ, ಜಯಪಾಲ ಹವಲೆ, ಡಿ.ಎಂ. ಪಾಟೀಲ, ಮಹಾದೇವ ನೇಜೆ, ಅಶೋಕ ಅಮ್ಮನ್ನವರ, ಮಹಾವೀರ ರೋಡ್ಡ, ಸಂಜಯ ಪಾಟೀಲ, ವಸಂತ ಪೂಜಾರ, ರಾಜಶೇಖರ ಹಿರೇಮಠ, ವಂದನಾ ಪಾಟೀಲ, ಮೇಘಾ ಪಾಟೀಲ, ವಿನಯಶ್ರೀ ಪಾಟೀಲ, ಸುಜಾತಾ ಪಾಟೀಲ, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು. ಆದಿನಾಥ ಹವಲೆ ನಿರೂಪಿಸಿದರು. ಎ.ಎ. ಧುಳಾಸಾವಂತ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts