ಪರಶುರಾಮಪುರದಲ್ಲಿ ಏಕಾದಶಿ ಉತ್ಸವ

ಪರಶುರಾಮಪುರ: ಕೋಟೆಕೆರೆ ಕಟ್ಟೆಮನೆ ಮಡಿವಾಳ ಸಮಾಜದವರು ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ಏಕಾದಶಿ ಉತ್ಸವ ನೆರವೇರಿಸಿದರು.

ಉತ್ಸವಕ್ಕೆ ಅಗತ್ಯ ಅಕ್ಕಿ, ಬೇಳೆ ಸೇರಿ ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ಗುಡಿಕಟ್ಟೆ ಅಣ್ಣ ತಮ್ಮಂದಿರು ಶನಿವಾರ ಆಗಮಿಸಿದರು. ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಧಾರ್ಮಿಕ ಕಾರ್ಯ, ಅಕ್ಕಿ ಅಳೆಯುವ ಶಾಸ್ತ್ರ, ಎಲೆ ಪೂಜೆ ಉತ್ಸವ ಜರುಗಿತು.

ಭಾನುವಾರ ಬೆಳಗ್ಗೆ ಅಭಿಷೇಕ, ಅಲಂಕಾರ, ಪೂಜೆ, ಮೇಲು ದೀಪೋತ್ಸವ ಹಾಗೂ ನೂರೊಂದು ಎಡೆ ಸಮರ್ಪಣೆ ನಡೆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಸ್ಥಾನದ ಯಜಮಾನ ತಿಮ್ಮಣ್ಣ, ಪೂಜಾರಿ ಹನುಮಂತರಾಯಪ್ಪ, ಮುಖಂಡರಾದ ಶ್ರೀನಿವಾಸ, ತಿಮ್ಮರಾಯ, ತಿಮ್ಮಣ್ಣ, ಕೇಶವಣ್ಣ, ತಿಪ್ಪೇಸ್ವಾಮಿ ಇತರರಿದ್ದರು.

Leave a Reply

Your email address will not be published. Required fields are marked *