ಕೈಗಾರಿಕೆಗಳ ಪರಿಚಯ ಮಕ್ಕಳಿಗೆ ಬೇಕು

ಪರಶುರಾಮಪುರ: ಗುಡಿ ಹಾಗೂ ಸಣ್ಣ ಕೈಗಾರಿಕೆಗಳ ಕಾರ್ಯ ವೈಖರಿಯನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಕೈಗಾರಿಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಮುಖ್ಯಶಿಕ್ಷಕ ಆರ್.ನಾಗರಾಜು ತಿಳಿಸಿದರು.

ಬಂಡೇಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳನ್ನು ಗುರುವಾರ ಸಮೀಪದ ಜಲ್ಲಿ ಕಲ್ಲು ಒಡೆಯುವ ಮಿಷನ್, ಅರಣ್ಯ ಪ್ರದೇಶಕ್ಕೆ ಹೊರ ಸಂಚಾರ ಕರೆದೊಯ್ದ ಸಂದರ್ಭದಲ್ಲಿ ಮಾತನಾಡಿದರು.

ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಪಠ್ಯ ಜತೆಗೆ ಸಹಪಠ್ಯ ಚಟುವಟಿಕೆಗಳ ಮೂಲಕ ಲೋಕ ಜ್ಞಾನದ ಅರಿವು ನೀಡಬೇಕು. ಇದರಿಂದ ಅವರಿಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.

ಮಕ್ಕಳಿಗೆ ಜಲ್ಲಿ ಕಲ್ಲು ಒಡೆಯುವ ಮಿಷಿನ್ ಕಾರ್ಯದ ಬಗ್ಗೆ ವಿವರಣೆ ನೀಡಿದರು. ಅರಣ್ಯದ ವಿವಿಧ ಪ್ರಭೇದದ ಗಿಡಮರಗಳನ್ನು ಪರಿಚಯಿಸಿದರು.
ಶಿಕ್ಷಕರಾದ ಎಚ್.ಹನುಮಂತಪ್ಪ, ಟಿ.ಮಂಜಣ್ಣ ಇತರರಿದ್ದರು.

Leave a Reply

Your email address will not be published. Required fields are marked *